ದಿನೇ ದಿನೇ ಹದಗೆಡುತ್ತಿರುವ ಬೆಂಗಳೂರಿನ ವಾತಾವರಣ - ರಾಜಧಾನಿ ನಿವಾಸಿಗಳಿಗೆ ಆತಂಕ!
ಬೆಂಗಳೂರು: ಬೆಂಗಳೂರಿನಲ್ಲಿ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ವಾಯು ಗುಣಮಟ್ಟ ತೀರಾ ಕಳಪೆಮಟ್ಟಕ್ಕೆ ಕುಸಿಯುತ್ತಿದೆ.
ಟ್ರಾಫಿಕ್ ಸಮಸ್ಯೆ, ಅತಿಯಾದ ಕಾಂಕ್ರೀಟಿಕರಣ ನಗರವನ್ನು ಕೂಪಕ್ಕೆ ತಳ್ಳುತ್ತಿದೆ.ಉದ್ಯಾನನಗರಿ ಬೆಂಗಳೂರು ಮುಂದೊಂದು ದಿನ ಮಾಲಿನ್ಯ ನಗರಿ ಅಂತ ಕರೆಸಿಕೊಂಡರೂ ಅಚ್ಚರಿಯಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಂತೆ ಇಲ್ಲಿಯೂ ಉಸಿರಾಡುವುದೂ ಕಷ್ಟವೆಂಬಂತಾಗುತ್ತೆ ಕಾಣುತ್ತಿದೆ.
ಬೆಂಗಳೂರಲ್ಲಿ ಡಿ.12 ಗಾಳಿಯ ಗುಣಮಟ್ಟ ಸೂಚ್ಯಂಕ 175ಕ್ಕೆ ತಲುಪಿತ್ತು. ಇಂದು ಗಾಳಿಯ ಗುಣಮಟ್ಟ ಸುಮಾರು 186 ರಿಂದ 206ರ ವರೆಗೂ ಏರಿಕೆ ಕಂಡಿದ್ದು, ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿರುವುದರಿಂದ ಉಸಿರಾಟದ ತೊಂದರೆಯಿರುವವರು ಜಾಗರೂಕರಾಗಿರಬೇಕಿದೆ. ಇಂದು ನಗರದಲ್ಲಿ PM2.5 95 ಮೈಕ್ರೋಗ್ರಾಮ್ ಇದ್ದು, PM10 ಪ್ರಮಾಣ 96 ಇದೆ. ಸಾರ್ವಜನಿಕರ ಲ್ಲಿ ಆಸ್ತಮಾದಂತಹ ಉಸಿರಾಟದ ತೊಂದರೆಗಳು ಎದುರಾಗುತ್ತವೆ. ಖಾರ್ಬನ್ ಮೊನಾಕ್ಸೈಡ್, ಓಜೋನ್, ನೈಟ್ರೋಜನ್ ಡೈ ಆಕ್ಸೈಡ್ಗಳ ಹೆಚ್ಚಳವೂ ಗಾಳಿಯನ್ನು ಉಸಿರಡೋದು ತುಂಬಾ ಡೇಂಜರಸ್ ಎನ್ನಲಾಗಿದೆ.
ಬೆಳ್ಳಂದೂರು, ಅರಕೆರೆ, ಸೇರಿದಂತೆ ಸುತ್ತಮುತ್ತಲಿನ ವಾತಾವರಣ ತೀವ್ರ ಹದಗೆಟ್ಟಿದ್ದು, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಏರುಗತಿಯಲ್ಲೇ ಇದೆ. ಉಸಿರಾಟ ಸಮಸ್ಯೆ ಇರೋ ಮಂದಿ ಹೆಚ್ಚು ಜಾಗೃತಿಯಿಂದ ಇರಬೇಕಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



