ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆಗರಿಷ್ಠ ಪ್ರಮಾಣದಲ್ಲಿ ಸಹಾಯ ನೀಡಲು ಸರಕಾರಕ್ಕೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾತ್ ಕರ್ನಾಟಕ ಮನವಿ

Nov 19, 2025 - 09:45
ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆಗರಿಷ್ಠ ಪ್ರಮಾಣದಲ್ಲಿ ಸಹಾಯ ನೀಡಲು ಸರಕಾರಕ್ಕೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾತ್ ಕರ್ನಾಟಕ ಮನವಿ

ಮಂಗಳೂರು: ಮೊಂಟೆಪದವು ನಿವಾಸಿಗಳಾಗಿದ್ದ  ಮರಿಕ್ಕಳ ಜಮಾಅತಿಗೆ ಒಳಪಟ್ಟ ಸುನ್ನೀ ಕಾರ್ಯಕರ್ತರಾದ ಇಬ್ರಾಹಿಮ್ ಬಟ್ಯಡ್ಕ .  ಅಟೋ ಚಾಲಕ ಮನ್ಸೂರ್ ಮರಿಕ್ಕಳ  ಅಬೂಬಕ್ಕರ್ ಮೊಂಟೆಪದವು  ಅವರು ಇತ್ತೀಚೆಗೆ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದು ಆ ಕುಟುಂಬದ ಮನೆಗೆ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಿಷೇಶ ಪ್ರಾರ್ಥನೆ ನಡೆಸಿದ್ದಾರೆ. 
ಅದಾದ ಬಳಿಕ ದಿನಾಂಕ 18.11.2025 ಮಂಗಳವಾರ ಬೆಳಿಗ್ಗೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿಯ  ರಾಜ್ಯ ಉಪಾಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಪ್ರಧಾನ ಕಾರ್ಯದರ್ಶಿ ಆಶ್ರಫ್ ಸಅದಿ ಮಲ್ಲೂರು ನೇತೃತ್ವದಲ್ಲಿ ಆ ಕುಟುಂಬಕ್ಕೆ ಗರಿಷ್ಠ ಸಹಾಯವನ್ನು ಸರಕಾರ ನೀಡಬೇಕು ಎಂದು ಕರ್ನಾಟಕ ವಿಧಾನ ಸಭಾದ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿ ಮಾಡಿ  ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸಿದ್ದೀಖ್ ಸಖಾಫಿ ಮೂಳೂರು,ಬದ್ರುದ್ದೀನ್ ಅಝ್ಹರಿ ಕೈಕಂಬ, ಹೈದರ್ ಅಲಿ ಹಿಮಮಿ ಮಲಾರ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0