ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್'ಜಾನ್ಗೆ ಅದ್ದೂರಿಯ ಚಾಲನೆ: "ಮುಅಲ್ಲಿಮರ ನಿಸ್ವಾರ್ಥ ಸೇವೆಯಿಂದ ಮಾತ್ರ ಸಮಾಜದ ಸದುನ್ನತಿ" ಉಜಿರೆ ತಂಙಳ್
ಚಿಕ್ಕಮಗಳೂರು: ಮುಸ್ಲಿಂ ಸಮಾಜದ ಪರಮೋನ್ನತ ಏಳಿಗೆಯಲ್ಲಿ ಮುಅಲ್ಲಿಮರ ಸೇವೆ ಅತ್ಯಂತ ಮಖ್ಯ ಪಾತ್ರವಾಗಿದೆ ಎಂದು ಎಸ್.ಎಂ.ಎ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಮದನಿ ಉಜಿರೆ ತಂಙಳ್ ರವರು ಅಭಿಪ್ರಾಯಪಟ್ಟರು.
ಮುದ್ರಸಾ ಅಧ್ಯಾಪಕರ ಒಕ್ಕೂಟವಾಗಿರುವ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ವತಿಯಿಂದ ನವೆಂಬರ್ 18 ಬೆಳಿಗ್ಗೆ 7 ಗಂಟೆಯಿಂದ ಚಿಕ್ಕಮಗಳೂರಿನ ಉಪ್ಪಳ್ಳಿಯ ಶಾದುಲಿ ಜುಮಾ ಮಸ್ಜಿದ್ ವಠಾರದ ಮರ್ಹೂಂ ಕಟ್ಟಿಪ್ಪಾರ ಉಸ್ತಾದ್ ವೇದಿಕೆಯಲ್ಲಿ ನಡೆಯುತ್ತಿದ್ದ ರಾಜ್ಯ ಮುಅಲ್ಲಿಂ ಮಹರ್'ಜಾನ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎಸ್.ಜೆ.ಎಂ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುಲ್ ರಹ್ಮಾನ್ ಮದನಿಯವರು ಅಧ್ಯಕ್ಷ ಭಾಷಣ ಮಾಡುತ್ತಾ ಸಕ್ರಿಯವಾಗಿ ಬೋಧನಾ ರಂಗಕ್ಕಿಳಿದಿರುವ ಮದ್ರಸಾ ಅಧ್ಯಾಪಕರಲ್ಲಿ ನಾಯಕತ್ವ ಗುಣವನ್ನು ಇನ್ನಷ್ಟು ಪೋಷಿಸಿ ಬೆಳೆಸಲು ಮುಅಲ್ಲಿಂ ಮಹರ್ ಜಾನ್ ಅತ್ಯಂತ ಸಹಕಾರಿಯಾಗಿದೆ ಎಂಬ ಕಿವಿ ಮಾತು ಹೇಳಿದರು.
ಮೂರು ಪ್ರಮುಖ ವೇದಿಕೆಯಲ್ಲಿ ಸುಮಾರು 40 ರಷ್ಟು ವೈವಿಧ್ಯಮಯ ಕಾರ್ಯಕ್ರಮದಲ್ಲಿ 300 ರಷ್ಟು ಮುಅಲ್ಲಿಮರು, ರಾಜ್ಯ ಮಟ್ಟದ ಸ್ಪಧೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ ಮುಅಲ್ಲಿಂ ಮಹರ್ ಜಾನ್.
ರಾಜ್ಯ ಪ್ರೋಗ್ರಾಮ್ ಸಮಿತಿ ಚಯರ್ ಮಾನ್ ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ವಾಹಿ ಪ್ರಾಸ್ತಾವಿಕ ಭಾಷಣ ನಡೆಸಿದರು. ಎಸ್.ಜೆ.ಎಂ. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಯೂಸುಫ್ ಮದನಿ ಬೇಲೂರು, ಕೆ.ಎಂ.ಜೆ ಜಿಲ್ಲಾಧ್ಯಕ್ಷ ಝಮೀರ್ ಬಾಳೆಹೊನ್ನೂರು, ಎಸ್.ಎಂ.ಎ ಜಿಲ್ಲಾಧ್ಯಕ್ಷ ಅಬೂಬಕರ್ ಸಿದ್ದೀಖ್ ಸಂಗೀನ್, ಯೂಸುಫ್ ಹಾಜಿ ಉಪ್ಪಳ್ಳಿ ಮುಂತಾದ ಗಣ್ಯರು ಮಾತನಾಡಿದರು.
ಸ್ಥಳೀಯ ಮುದರ್ರಿಸ್ ಇಸ್ಮಾಯೀಲ್ ಸಅದಿ ಮಾಚಾರ್ ರವರ ನಾಯಕತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು. ಶಾದುಲಿ ಜುಮಾ ಮಸ್ಜಿದ್ ಅಧ್ಯಕ್ಷರೂ ಸ್ವಾಗತ ಸಮಿತಿ ಚಯರ್ ಮಾನರೂ ಆದ ಉಸ್ಮಾನ್ ಹಾಜಿ ಹಂಡುಗುಳಿಯವರು ದ್ಜಜಾರೋಹಣ ನೆರವೇರಿಸಿದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಮದನಿ ಸಭೆಯನ್ನು ಸ್ವಾಗತಿಸಿದರು. ರಾಜ್ಯ ಎಸ್.ಜೆ.ಎಂ ಕೋಶಾಧಿಕಾರಿ ಅಬ್ದುಲ್ ರಶೀದ್ ಸಖಾಫಿ ಮಜೂರು, ಎಸ್.ಎಂ.ಎ.ರಾಜ್ಯ ಉಪಾಧ್ಯಕ್ಷ ಬಿ.ಎಸ್. ಮುಹಮ್ಮದ್, ಎಸ್.ವೈ.ಎಸ್. ಕಲ್ಚರಲ್ ಕಾರ್ಯದರ್ಶಿ ಸೈಯದ್, ಎಸ್.ಎಸ್.ಎಫ್ ರಾಷ್ಟ್ರೀಯ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು, ನಾಸಿರ್ ಇಂಪಾಲ್, ಇಸ್ಮಾಯೀಲ್ ಸಅದಿ ಉರುಮನೆ, ಯಾಕೂಬ್ ಲತ್ವೀಫಿ, ಅಬ್ದುಲ್ಲ ಸಖಾಫಿ ಕೊಡಗು, ಕೆ.ಕೆ.ಎಂ.ಕಾಮಿಲ್ ಸಖಾಫಿ, ಪುಂಡೂರು ಇಬ್ರಾಹೀಂ ಸಖಾಫಿ ಮುಂತಾದ ರಾಜ್ಯ ನಾಯಕರು ಉಪಸ್ಥಿತರಿದ್ದರು. ಮುಫತ್ತಿಶರುಗಳಾದ ಹಸನ್ ಸಖಾಫಿ, ಖಲಂದರ್ ಸಖಾಫಿ, ಮುಸ್ತಫ ಹಿಮಮಿ ಮುಂತಾದವರು ಪಾಲ್ಗೊಂಡು ವೇದಿಕೆಯನ್ನು ಧನ್ಯಗೊಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



