ವಿವಾದಗಳು ಶಿಕ್ಷಣದ ಪ್ರಗತಿಗೆ ಅಡ್ಡಿಯಾಗಬಾರದು: ಭಾರತೀಯ ಗ್ರಾಂಡ್ ಮುಫ್ತಿ

Nov 9, 2025 - 13:56
Nov 9, 2025 - 12:44
ವಿವಾದಗಳು ಶಿಕ್ಷಣದ ಪ್ರಗತಿಗೆ ಅಡ್ಡಿಯಾಗಬಾರದು: ಭಾರತೀಯ ಗ್ರಾಂಡ್ ಮುಫ್ತಿ

ಪುತ್ತಿಗೆ: ರಾಜ್ಯದ ಶಿಕ್ಷಣದ ಪ್ರಗತಿಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು, ಈಗಾಗಲೇ ಸಾಧಿಸಿರುವ ಮುನ್ನಡೆಯಿಗೆ ವಿವಾದಗಳು ಅಡ್ಡಿಯಾಗಬಾರದು ಎಂದು ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು. ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನಲ್ ಸೆಂಟರ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಪ್ರಯತ್ನಗಳ ಜೊತೆಗೆ ವ್ಯಕ್ತಿಗಳೂ, ಸಂಸ್ಥೆಗಳೂ ಕೈ ಜೋಡಿಸಿದ್ದರಿಂದ ಕೇರಳದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗಿದೆ. ಈ ಕ್ಷೇತ್ರದಲ್ಲಿ ಸುನ್ನಿ ಸಂಘಟನೆಗಳು ಮತ್ತು ಸಂಸ್ಥೆಗಳು ನೀಡಿರುವ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಒಂದು ಕಾಲದಲ್ಲಿ ಹಿಂದುಳಿದ ಪ್ರದೇಶವಾಗಿದ್ದ ಪುತ್ತಿಗೆ ಕೇಂದ್ರವಾಗಿಸಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಆರಂಭಿಸಿದ ಮುಹಿಮ್ಮಾತ್ ಈ ಪ್ರದೇಶದ ಮುಖಚಿತ್ರ ಬದಲಾಯಿಸಿದೆ. ಅನಾಥರು, ಅಶಕ್ತರು ಹಾಗೂ ಆಶ್ರಯವಿಲ್ಲದ ವೃದ್ಧರಿಗೆ ಸಹ ಮುಹಿಮ್ಮಾತ್ ಆಶ್ರಯ ನೀಡುತ್ತಿದೆ.

ಸಾಮಾನ್ಯ ಸಭೆಯನ್ನು ಮರ್ಕಝ್ ಡೈರೆಕ್ಟರ್ ಜನರಲ್ ಸಿ. ಮೊಹಮ್ಮದ್ ಫೈಸಿ ಉದ್ಘಾಟಿಸಿದರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹಿಂ ಅಲ್ ಹಾದಿ ತಂಙಳ್ ಚೂರಿ, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ವೈ.ಎಂ. ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಬಶೀರ್ ಪುಳಿಕ್ಕೂರು, ಅಬೂಬಕರ್ ಕಾಮಿಲ್ ಸಖಾಫಿ, ಅಡ್ವ. ಶಾಕಿರ್ ಹಾಜಿ ಮಿತ್ತೂರು, ಕರಾಯ ಖಾಸಿಂ ಮದನಿ, ಅಬ್ದುಸ್ಸಲಾಮ್ ದಾರಿಮಿ ಕುಬಣೂರು, ಮೊಯ್ದು ಸಅದಿ ಚೇರೂರು, ಸಯ್ಯಿದ್ ಹುಸೈನ್ ಅಹ್ದಲ್ ತಂಙಳ್, ಮೊಯ್ದು ಹಾಜಿ ಕಲ್ಲಪಿಲಾವು, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಚಳ್ಳಂಕಯಂ, ಇಬ್ರಾಹಿಂ ಹಾಜಿ ಕುಬಣೂರು, ಹಾಜಿ ಶಂಸುುದ್ದೀನ್ ಕೊಳ್ಳಿಯಾಡ್, ನಟುಬಯಲ್ ಮೊಹಮ್ಮದ್ ಹಾಜಿ, ಅಬ್ದುಲ್ಲಾ ಗುಣಾಜೆ, ಮುಸ್ತಫಾ ಸಖಾಫಿ, ಅಬ್ದುಲ್ ಫತ್ತಾಹ್ ಸಅದಿ, ಎ.ಕೆ. ಸಅದಿ ಚುಳ್ಳಿಕ್ಕಾನಂ, ತ್ವಾಹಿರ್ ಹಾಜಿ, ಅಡ್ವ. ರಿಫಾಯಿ ಹಿಮಮಿ, ಅಬ್ದುಲ್ ಅಝೀಸ್ ಹಿಮಮಿ, ರಈಸ್ ಮುಈನಿ, ಅಶ್ರಫ್ ಹಿಮಮಿ ಉಳುವಾರ್, ಬಾದುಷಾ ಹಾದಿ ಸಖಾಫಿ, ಮೊಹಮ್ಮದ್ ಹಾಜಿ ಪೇರಾಲ್, ಅಲಂಕಾರ್ ಮೊಹಮ್ಮದ್ ಹಾಜಿ, ವಿ.ಸಿ. ಅಬ್ದುಲ್ಲಾ ಸಅದಿ, ನ್ಯಾಷನಲ್ ಅಬ್ದುಲ್ಲಾ, ಸಲೀಂ ಕೋಪ್ಪ, ಇತ್ತಿಹಾದ್ ಮೊಹಮ್ಮದ್ ಹಾಜಿ, ಸುಲ್ತಾನ್ ಮಹ್ಮೂದ್ ಪಟ್ಟಳ, ಸಿ.ಕೆ. ಮೊಹಮ್ಮದ್, ಅಲಿಕ್ಕುಂಜಿ ಮದನಿ, ಮುಹ್ಯುದ್ದೀನ್ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಹಾಜಿ ಬಳ್ಳೂರು, ಹಂಸ ಸಖಾಫಿ ಉಪ್ಪಿನ, ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್, ಮುನೀರ್ ಹಿಮಮಿ ಮಾನಿಮೂಲ, ಅಬ್ದುಲ್ ಖಾದರ್ ಹಾಜಿ ಕಳಾಯಿ, ಪಾಡಿ ಅಬ್ದುಲ್ಲಾ ಕುಂಜಿ ಹಾಜಿ, ಪಿ. ಇಬ್ರಾಹಿಂ ಪುತ್ತಿಗೆ, ಬಶೀರ್ ಹಾಜಿ ಮುಗು, ಪಿ.ಎಂ. ಮೊಹಮ್ಮದ್ ಅಲಿ, ಅಬ್ದುರ್ರಹ್ಮಾನ್ ಸಖಾಫಿ ಕೂಲಿಮಾಡ್, ಮೊಹಮ್ಮದ್ ಮುಸ್ಲಿಯಾರ್ ತುಪ್ಪಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲಾ ಕುಂಜಿ ಫೈಸಿ ಸ್ವಾಗತಿಸಿದರು ಮತ್ತು ಜೆನರಲ್ ಮ್ಯಾನೇಜರ್ ಉಮರ್ ಸಖಾಫಿ ಧನ್ಯವಾದ ಸಲ್ಲಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0