ಮುಹಿಮ್ಮಾತ್ ‘ಕ್ಯಾಲೆಂಡರ್ 2026’ ಬಿಡುಗಡೆ
ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ವತಿಯಿಂದ ಪ್ರಕಟಿಸಲಾದ 2026ನೇ ವರ್ಷದ ಕ್ಯಾಲೆಂಡರ್ ಅನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಬಿಡುಗಡೆಗೊಳಿಸಿದರು. ಕ್ಯಾಲೆಂಡರ್ ಪ್ರತಿಯನ್ನು ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಸ್ವೀಕರಿಸಿದರು.
ಪ್ರಥಮ ಹಂತದಲ್ಲಿ ಮನೆ ಭೇಟಿಯ ಮೂಲಕ ಸುಮಾರು ಅರ್ಧ ಮಿಲಿಯನ್ ಕುಟುಂಬಗಳಿಗೆ ಕ್ಯಾಲೆಂಡರ್ ತಲುಪಿಸಲಾಗುವುದು. ಈ ಕ್ಯಾಲೆಂಡರ್ ಮೂಲಕ ಮುಹಿಮ್ಮಾತ್ ಸಂಸ್ಥೆಯ ಹೊಸ ಯೋಜನೆಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗುತ್ತದೆ.
ಈ ಸಂದರ್ಭ ಮರ್ಕಝ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಝಿ, ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಸಯ್ಯಿದ್ ಇಬ್ರಾಹಿಂ ಅಲ್ ಹಾದಿ ಸಖಾಫಿ ತಂಙಳ್ ಚೂರಿ, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಹಾಜಿ ಅಮೀರಲಿ ಚೂರಿ ಮತ್ತಿತರರು ಉಪಸ್ಥಿತರಿದ್ದರು.
What's Your Reaction?
Like
2
Dislike
1
Love
0
Funny
1
Angry
0
Sad
0
Wow
0



