ಮುಹಿಮ್ಮಾತ್ ಸನದ್ ದಾನ; 'ಇಅಲಾನ್' ಸೌದಿ ಕಾರ್ಯಕಾರಿ ಸಭೆ ಗಮನಾರ್ಹವಾಯಿತು.

Nov 1, 2025 - 16:44
ಮುಹಿಮ್ಮಾತ್ ಸನದ್ ದಾನ; 'ಇಅಲಾನ್' ಸೌದಿ ಕಾರ್ಯಕಾರಿ ಸಭೆ ಗಮನಾರ್ಹವಾಯಿತು.

ದಮ್ಮಾಮ್: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಉರೂಸ್ ಮುಬಾರಕ್ ಇದರ ಭಾಗವಾಗಿ ಆಯೋಜಿಸುವ ಮುಹಿಮ್ಮಾತ್ ಸನದ್ ದಾನ ಸಮ್ಮೇಳನದ ಪ್ರಚಾರ ಚಟುವಟಿಕೆಗಳನ್ನು ರೂಪಿಸಲು ಮತ್ತು ಯೋಜನೆಯನ್ನು ಅಧ್ಯಯನ ಮಾಡಲು ಆಯೋಜಿಸಲಾದ 'ಇಅಲಾನ್' ಕಾರ್ಯಕಾರಿ ಸಭೆಯು ಮುಕ್ತಾಯಗೊಂಡಿದೆ.
ದಮ್ಮಾಮ್ ಹಾಲಿಡೇ ಹೋಟೆಲ್‌ನಲ್ಲಿ ನಡೆದ ಸಭೆಯನ್ನು ಐಸಿಎಫ್ ಸೌದಿ ರಾಷ್ಟ್ರೀಯ ಉಪಾಧ್ಯಕ್ಷ ಅನ್ವರ್ ಕೊಲ್ಲೋಡ್ ರವರ ಅದ್ಯಕ್ಷತೆಯಲ್ಲಿ ಐಸಿಎಫ್ ಅಂತರರಾಷ್ಟ್ರೀಯ ಕಾರ್ಯದರ್ಶಿ ಸಲೀಂ ಪಲಾಚಿರ ಉದ್ಘಾಟಿಸಿದರು. ಮುಹಿಮ್ಮಾತ್ ಕೇಂದ್ರ ಸಮಿತಿ ಕಾರ್ಯದರ್ಶಿ ಮೂಸಾ ಸಖಾಫಿ ಕಳತ್ತೂರು ಯೋಜನಾ ಅಧ್ಯಯನಕ್ಕೆ ನೇತೃತ್ವ ನೀಡಿದರು.
ಐಸಿಎಫ್ ಅಲ್ ಕೋಬಾರ್ ನೇತಾರ ಅಶ್ರಫ್ ತೊಟ್ಟಡ , ಕೆಸಿಎಫ್ ನೇತಾರ ಹಬೀಬ್ ಸಖಾಫಿ ಉಳ್ಳಾಲ, ಆರ್ ಎಸ್ ಸಿ ಕಾರ್ಯದರ್ಶಿ ಆಶಿಕ್ ಆಲಪ್ಪುಝ ಮೊದಲಾದವರು ಮಾತನಾಡಿದರು.
ಅಬ್ದುಲ್ ಅಝೀಝ್ ಮುನ್ನೂರು, ಅಮಾನ ಮುಹಮ್ಮದ್, ಮೂಸಾ ಝುಹ್ರಿ ಪಳ್ಳತಡ್ಕ, ಅಬ್ದುಲ್ ಖಾದರ್ ಸಅದಿ ಕೊಟುಂಬ, ಅಬೂಬಕರ್ ಸಅದಿ ಕೊಡಿಯಮ್ಮ,
ಅನೀಸ್ ಬಲಿಯೂರು, ಕಬೀರ್ ಕಿನ್ನಿಂಗಾರ್, ಅರಾಫತ್ ಆರಿಕ್ಕಾಡಿ, ಖಾತಿಂ ಕಿನ್ನಿಂಗಾರ್, ಅಶ್ರಫ್ ಕೋಟ್ಟಕುನ್ನು, ಸೈನ್ ಕುಂಬೋಳ್, ಅಶ್ರಫ್ ಚಿಕ್ಕಮಂಗಳೂರು, ಕುಂಜಾರ್ ಅಬ್ದುರಹ್ಮಾನ್ ಹಾಜಿ, ಮುಹಮ್ಮದ್ ಉಪ್ಪಿನ, ಲತೀಫ್ ಪಳ್ಳತ್ತಡುಕ, ಮುಹಮ್ಮದ್ ಕುಂಞಿ ಉಳುವಾರ್ ಮೊದಲಾದವರು ಉಪಸ್ಥಿತರಿದ್ದರು.
ಸಿದ್ದೀಕ್ ಸಖಾಫಿ ಉರುಮಿ ಸ್ವಾಗತಿಸಿ, ಮುಹಮ್ಮದ್ ಪುಂಡೂರ್ ಧನ್ಯವಾದ ಅರ್ಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0