ಸೃಷ್ಟಿಕರ್ತ ನನ್ನು ಮರೆತು ಜೀವಿಸುವಾಗ ಅನಾಹುತಗಳು ಮೇಲೆರಗುತ್ತವೆ : ಬಹು| ಇಸಾಕ್ ಫೈಝಿ ಉಚ್ಚಿಲ
ಮಾಣಿ : ಕಡ್ಡಾಯ ಆರಾಧನಾ ಕರ್ಮಗಳು ಇಲ್ಲದೆ,ಔರತ್ ಆದ ಭಾಗಗಳು ತೆರೆಯಲ್ಪಟ್ಟು ಸಾರ್ವಜನಿಕವಾಗಿ ಸುತ್ತಾಡುವುದು,ಅಕ್ರಮಗಳು ಹೆಚ್ಚೆಚ್ಚು ತಾಂಡವವಾಡುವಾಗ ಮುನಿಸಿಕೊಳ್ಳುವ ಸೃಷ್ಟಿಕರ್ತನು ಅನಾಹುತಗಳನ್ನು ನೀಡಿ ಪರೀಕ್ಷಿಸುವನು ಭಯ ಭಕ್ತಿ ಆರಾಧನಾ ಕರ್ಮಗಳನ್ನು ಮೈಗೂಡಿಸಿ ಸೃಷ್ಟಿಕರ್ತನ ಭಯದೊಂದಿಗೆ ಜೀವಿಸಿರಿ ಖಂಡಿತಾ ವಿಜಯಿಗಳಾಗುವಿರಿ ಎಂದು ಬಹು| ಇಸಾಕ್ ಫೈಝಿ ಉಚ್ಚಿಲ ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಯೂಸುಫ್ ಹಾಜಿಯವರ ನಿವಾಸದಲ್ಲಿ ನಡೆದ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ನಲ್ಲಿ ನೇತೃತ್ವ ನೀಡಿ ಮಾತನಾಡಿದರು,ಜೀಲಾನಿ ಅನುಸ್ಮರಣಾ ಭಾಗವಾಗಿ ಮುಹ್ಯಿದ್ದೀನ್ ಮಾಲೆ ಆಲಾಪನೆ ಕಾರ್ಯಕ್ರಮ ಹಂಝ ಕಾಯರಡ್ಕ ರವರ ನಿವಾಸದಲ್ಲಿ ನಡೆಸಲಾಗಿತ್ತು,ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ ಪಾಟ್ರಕೋಡಿ ಇದರ ಸ್ಥಾಪಕರಾದ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಮತ್ತು ಬಹು| ಮುಬಶ್ಶಿರ್ ಹಿಕಮಿ ಸಅದಿ ಮುಖ್ಯ ಅತಿಥಿಯಾಗಿ ಭಾಗವಗಿಸಿದರು,ಕಾರ್ಯಕ್ರಮದಲ್ಲಿ ಕಾಸರಗೋಡು ಜಾಮಿಆ ಸಅದಿಯಾ ಕಾಲೇಜು ಅಧ್ಯಾಪಕ ಮುಹಮ್ಮದ್ ಸಅದಿ, ಕೆಸಿಎಫ್ ನಾಯಕ ಆಸಿಫ್ ಸೂರಿಕುಮೇರು, ಮುಸ್ಲಿಂ ಜಮಾಅತ್ ನಾಯಕರಾದ ದಾವೂದ್ ಕಲ್ಲಡ್ಕ,ಲತೀಫ್ ಹಾಜಿ ಫಲಾಹ್ ಕಲ್ಲಡ್ಕ,ಚಿಕನ್ ಇಬ್ರಾಹಿಂ ಮಾಣಿ,ಅಬ್ದುಲ್ ಕರೀಂ ನೆಲ್ಲಿ,ಹಂಝ ಸೂರಿಕುಮೇರು, ಹನೀಫ್ ಸಂಕ,ಆದಂ ನೆಲ್ಲಿ,ಅಶ್ರಫ್ ಸಖಾಫಿ ಸೂರಿಕುಮೇರು, ಮುಂತಾದವರು ಉಪಸ್ಥಿತರಿದ್ದರು,ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



