ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ - ನಾಲ್ವರು ಸ್ಥಳದಲ್ಲೇ ಸಾವು, 16 ಜನ ಗಂಭೀರ

Oct 12, 2025 - 09:42
ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ - ನಾಲ್ವರು ಸ್ಥಳದಲ್ಲೇ ಸಾವು, 16 ಜನ ಗಂಭೀರ

ವಾಷಿಂಗ್ಟನ್: ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹೈಸ್ಕೂಲ್ ನಲ್ಲಿ ಅಪರಿಚಿತ ವ್ಯಕ್ತಿಯಿಂದ ಏಕಾಏಕಿ ಗುಂಡಿನ ದಾಳಿ ನಡೆದಿದೆ.

16 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರ ಪರಾರಿಯಾಗಿದ್ದಾನೆ.

ಮಿಸ್ಸಿಸ್ಸಿಪ್ಪಿಯ ಲೆಲ್ಯಾಂಡ್‌ನಲ್ಲಿರುವ ಲೆಲ್ಯಾಂಡ್ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ 16 ಜನರು ಗಾಯಗೊಂಡರು.

ಶುಕ್ರವಾರ ರಾತ್ರಿ 11:30 ರ ನಂತರ ಚಾರ್ಲ್ಸ್‌ಟನ್ ಪ್ರೌಢಶಾಲೆ ವಿರುದ್ಧದ ಹೋಮ್‌ಕಮಿಂಗ್ ಪಂದ್ಯದ ವೇಳೆ ಈ ಮನಕಲಕುವ ಘಟನೆ ಸಂಭವಿಸಿದೆ. ಶನಿವಾರ ಮಧ್ಯರಾತ್ರಿಯ ನಂತರ ಇದು ಸಂಭವಿಸಿದೆ ಎಂದು ಕೆಲವು ವರದಿಗಳು ಸೂಚಿಸುತ್ತವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0