ಪ್ರತಿಭೆಗಳ ಉತ್ಸವ : ಸೆಪ್ಟೆಂಬರ್ 07 SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವ

Sep 5, 2025 - 09:51
ಪ್ರತಿಭೆಗಳ ಉತ್ಸವ : ಸೆಪ್ಟೆಂಬರ್ 07 SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವ

ವಿದ್ಯಾರ್ಥಿಗಳು ದಾರಿತಪ್ಪುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಅವರನ್ನು ಧಾರ್ಮಿಕ ಪ್ರಜ್ಞೆಯೊಂದಿಗೆ ಬೆಳೆಸುವ, ಭವಿಷ್ಯದ ಸಮುದಾಯದ ನಾಯಕರನ್ನಾಗಿಸುವ ಹಾಗೂ ಇಸ್ಲಾಮಿನ ಸಾಂಸ್ಕೃತಿಕ ಕಲಾ ವೈಭವವನ್ನು ಉಳಿಸುವ ಸಲುವಾಗಿ ನೀರಿಕ್ಷೆಗಳ ನೀಲ ನಕ್ಷೆ ಎಂಬ ಧ್ಯೆಯವಾಕ್ಯದೊಂದಿಗೆ SSF ವರ್ಷಂಪ್ರತಿ ಸಾಹಿತ್ಯೋತ್ಸವವನ್ನು ಯೂನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದೆ. ಭಾಷಣ, ಬರಹ ಮತ್ತು ಗಾಯನ ಸೇರಿದಂತೆ 07 ವಿಭಾಗಗಳಾಗಿ 150 ಕ್ಕೂ ಹೆಚ್ಚಿನ ಸ್ಪರ್ಧೆಗಳ ಮೂಲಕ ಯುವ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ, ಶಾಖೆ ಸೆಕ್ಟರ್,ಡಿವಿಷನ್, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಸ್ತರದಲ್ಲಿ ಹಂತ-ಹಂತವಾಗಿ ನಡೆಯುವ ಈ ಸಾಹಿತ್ಯೋತ್ಸವಕ್ಕೆ SSF ಮಡಂತ್ಯಾರ್ ಸೆಕ್ಟರ್ ಕೂಡ ಅನಿಯಾಗಲಿದೆ. ಇದೇ ಬರುವ  ಸೆಪ್ಟೆಂಬರ್ 07 ರ ಆದಿತ್ಯವಾರ ನೂರುಲ್ ಹುದಾ ಮಸ್ಜಿದ್ ವಠಾರ ಮಡಂತ್ಯಾರು ಸೆಕ್ಟರ್ ಸಾಹಿತ್ಯೋತ್ಸವ 2025 ಕ್ಕೆ ಸಾಕ್ಷಿಯಾಗಲಿದೆ. ಸಾಹಿತ್ಯೋತ್ಸವ ಸಮಿತಿ ನಾಯಕರುಗಳಾದ ಛೇರ್ಮನ್ ನೌಷದ್ ಸಖಾಫಿ ಅಲ್ ಮುಈನಿ ಮಾಲಾಡಿ, ಜನರಲ್ ಕನ್ವಿನರ್ ಸುಹೈಲ್ ಪಾಂಡವರಕಲ್ಲು, ಫೈನಾನ್ಸ್ ಕಂಟ್ರೋಲರ್ ಮಹಮ್ಮದ್ ರಾಝಿಕ್ ಮಾಲಾಡಿ ನೇತೃತ್ವದ ತಂಡದಿಂದ ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ಚುರುಕಿನ ಕಾರ್ಯಾಚರಣೆ ಆರಂಭಗೊಂಡಿದೆ. 

ಅತ್ಯಂತ ಅದ್ದೂರಿಯಾಗಿ ಜರುಗಳಿರುವ ಪ್ರತಿಭೆಗಳ ಉತ್ಸವದಲ್ಲಿ ಮಡಂತ್ಯಾರು ಸೆಕ್ಟರ್ ವ್ಯಾಪ್ತಿಯ 09 ಶಾಖೆಗಳ ಸರಿಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲಿದ್ದಾರೆ. ಐತಿಹಾಸಿಕವಾಗಿ ನಡೆಯಲಿರುವ SSF ಮಡಂತ್ಯಾರು ಸೆಕ್ಟರ್ ಸಾಹಿತ್ಯೋತ್ಸವವನ್ನು ಬೆಳ್ತಂಗಡಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಮತ್ತು ಸ್ಥಳೀಯ ಖತೀಬರು ಆದ ಅಬ್ದುಲ್ ರಝಾಕ್ ಸಖಾಫಿ ರವರು ಉಧ್ಘಾಟಿಸಲಿದ್ದಾರೆ. ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಮಾಲಾಡಿರವರ ಘನಅಧ್ಯಕ್ಷತೆಯಲ್ಲಿ ನಡೆಯವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಾದಿ ಇರ್ಫಾನ್ ಅಕಾಡೆಮಿ ಸೆಂಟರ್ ಛೇರ್ಮನ್ ಅಸ್ಸಯ್ಯದ್ ಫಝಲ್ ಜಮಲುಲ್ಲೈಲಿ ತಂಙಳ್, ಕರ್ನಾಟಕ ಮುಸ್ಲಿಂ ಜಮಾಅತ್ ಸರ್ಕಲ್ ಅಧ್ಯಕ್ಷರು ಮತ್ತು ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷರಾದ ನಝೀರ್ ಹಾಜಿ, KMJ ಸರ್ಕಲ್ ಪ್ರಧಾನ ಕಾರ್ಯದರ್ಶಿ ಸಾವುಲ್ ಹಮೀದ್ ಬರ್ನ, SYS ಮಡಂತ್ಯಾರ್ ಸರ್ಕಲ್ ಅಧ್ಯಕ್ಷರಾದ ನಝೀರ್ ಮದನಿ, SYS ಬೆಳ್ತಂಗಡಿ ಝೋನ್ ಉಪಾಧ್ಯಕ್ಷರು ಆಗಿರುವ ಅಯ್ಯುಬ್ ಮಹ್ಳರಿ ಸೇರಿದ ಇನ್ನಿತರ ಉಲಮಾ ಉಮರ ನಾಯಕರು ಭಾಗವಹಿಸಲಿದ್ದಾರೆ ಎಂದು SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ ಫೈನಾನ್ಸ್ ಕಂಟ್ರೋಲರ್ ಮಹಮ್ಮದ್ ರಾಝಿಕ್ ಮಾಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1