ಹಿಂದುಳಿದ ವರ್ಗಕ್ಕೆ ಸೇರಿದವರ ಹೆಸರುಗಳನ್ನೇ ಅಳಿಸಿದ ಚುನಾವಣಾ ಆಯೋಗ: ಅಖಿಲೇಶ್ ಯಾದವ್

Aug 19, 2025 - 10:51
ಹಿಂದುಳಿದ ವರ್ಗಕ್ಕೆ ಸೇರಿದವರ ಹೆಸರುಗಳನ್ನೇ ಅಳಿಸಿದ ಚುನಾವಣಾ ಆಯೋಗ: ಅಖಿಲೇಶ್ ಯಾದವ್

ನವದೆಹಲಿ: ’ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದವರ ಹೆಸರುಗಳನ್ನೇ ಮತದಾರರ ಪಟ್ಟಿಯಿಂದ ಅಳಿಸಿಹಾಕಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಆರೋಪಿಸಿದ್ದಾರೆ.

ಸಂಸತ್ತಿನ ಆವರಣದಲ್ಲಿ ಸೋಮವಾರ ಮಾತನಾಡಿರುವ ಅವರು, ‘ಮೌರ್ಯ, ಪಾಲ್‌, ಭಗೇಲ್‌ ಮತ್ತು ರಾಥೋಡ್‌ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಸೇರಿದವರ ಹೆಸರುಗಳನ್ನೇ ಪಟ್ಟಿಯಿಂದ ತೆಗೆದುಹಾಕಿ ಬಿಜೆಪಿಗೆ ಲಾಭ ಮಾಡಿಕೊಟ್ಟಿದೆ’ ಎಂದು ದೂರಿದ್ದಾರೆ.

‘ಅವರ ಮತಗಳನ್ನು ಅಳಿಸಲಾಗಿದೆ ಎಂಬುದಷ್ಟೇ ಸತ್ಯ. ಇದೇ ವಿಷಯವನ್ನು ಸಮಾಜವಾದಿ ಪಕ್ಷವು ಈ ಹಿಂದೆಯೂ ಪ್ರಸ್ತಾಪಿಸಿತ್ತು. ಹಿಂದುಳಿದವರ ಮತಗಳನ್ನು ಉದ್ದೇಶಪೂರ್ವಕವಾಗಿಯೇ ಅಳಿಸಿ, ಆ ಮತಗಳು ಬೇರೆಡೆ ಹೋಗುವಂತೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಯಾವೆಲ್ಲಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಥಾನಗಳನ್ನು ಕಡಿಮೆ ಮತಗಳ ಅಂತರದಿಂದ ಕಳೆದುಕೊಂಡಿದೆಯೋ ಅಲ್ಲೆಲ್ಲಾ ಕಡೆ ಮತದಾರರ ಹೆಸರು ಅಳಿಸಿ ಹಾಕಿರುವುದು ಪ್ರಮುಖ ಪಾತ್ರ ವಹಿಸಿದೆ. 2019ರಲ್ಲಿ ಮತ ಹಾಕಿದವರ ಹೆಸರುಗಳು 2022ರ ಚುನಾವಣೆಯಲ್ಲಿ ಅಳಿಸಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲೂ ನಿರ್ದಿಷ್ಟ ಪ್ರಕ್ರಿಯೆಗಳಿವೆ. ಆದರೆ ಅದೂ ಪಾಲನೆಯಾಗಿಲ್ಲ’ ಎಂದಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0