ಸೂರಿಕುಮೇರು : ಸುನ್ನೀ ಸಂಘಟನೆಗಳ ವತಿಯಿಂದ ಧ್ವಜಾರೋಹಣ

Aug 15, 2025 - 18:58
ಸೂರಿಕುಮೇರು : ಸುನ್ನೀ ಸಂಘಟನೆಗಳ ವತಿಯಿಂದ ಧ್ವಜಾರೋಹಣ

ಮಾಣಿ : ಇಲ್ಲಿನ ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ಬಳಿ ದೇಶದ 79ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ ,ಸುನ್ನೀ ಸ್ಟೂಡೆಂಟ್ ಫೆಡರೇಶನ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಯೂಸುಫ್ ಹಾಜಿ ಧ್ವಜಾರೋಹಣ ಮಾಡಿದರು,ವೈದ್ಯಕೀಯ ವಿದ್ಯಾರ್ಥಿ ಮುಹೈಮಿನ್ ಸೂರಿಕುಮೇರು, ಆಶಿಕ್ ಸೂರಿಕುಮೇರು ರಾಷ್ಟಗೀತೆ ಹಾಡಿದರು,ಕಾರ್ಯಕ್ರಮದಲ್ಲಿ ಕರೀಂ ನೆಲ್ಲಿ, ಹಂಝ ಸೂರಿಕುಮೇರು, ಫಾರೂಕ್ ಶೂ ಪ್ಯಾಲೇಸ್, ನಿಝಾಂ ಸ‌ಅದಿ ಸೂರಿಕುಮೇರು, ಫಾರೂಕ್ ಯೂಸುಫ್,ಅಶ್ರಫ್ ಸಖಾಫಿ ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಶುಭಹಾರೈಸಿ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0