ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರ ರಕ್ಷಣೆ

Jul 31, 2025 - 10:29
ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರ ರಕ್ಷಣೆ

ಕಾರವಾರ: ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮಹಾಸತಿ ಎಂಬ ಗಿಲ್​ನೆಟ್ ನಾಡದೋಣಿ ಅಲೆಗಳ ಅಬ್ಬರಕ್ಕೆ ಮಗುಚಿ ನಾಲ್ವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮನೋಹರ ಎಂಬವರಿಗೆ ಸೇರಿದ ದೋಣಿಯಲ್ಲಿ ಒಟ್ಟು ಆರು ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿನ ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಪಲ್ಟಿಯಾಗಿದ್ದು, ನಾಲ್ವರೂ ನೀರು ಪಾಲಾಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ದೋಣಿ ಮಗುಚಿದ ಕೂಡಲೇ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ಮನೋಹರ ಮೊಗೇರ ಮತ್ತು ರಾಮಾ ಖಾರ್ವಿ ಅವರನ್ನು ರಕ್ಷಿಸಿದ್ದಾರೆ. ಆದರೆ, ರಾಮಕೃಷ್ಣ ಮೊಗೇರ, ಸತೀಶ ಮೊಗೇರ, ಗಣೇಶ ಮೊಗೇರ ಮತ್ತು ನಿಶ್ಚಿತ್ ಮೊಗೇರ ಎಂಬ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಪಲ್ಟಿಯಾದ ದೋಣಿ ಅಳ್ವೇಕೋಡಿ ಬ್ರೇಕ್ ವಾಟರ್ ಬಳಿ ಪತ್ತೆಯಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0