ಮಹಿಳಾ ಚೆಸ್ ವಿಶ್ವಕಪ್ ಕಿರೀಟ ಗೆದ್ದ ಭಾರತದ ಮೊದಲ ಆಟಗಾರ್ತಿ ದಿವ್ಯಾ ದೇಶ್‌ಮುಖ್

Jul 28, 2025 - 17:57
ಮಹಿಳಾ ಚೆಸ್ ವಿಶ್ವಕಪ್ ಕಿರೀಟ ಗೆದ್ದ ಭಾರತದ ಮೊದಲ ಆಟಗಾರ್ತಿ ದಿವ್ಯಾ ದೇಶ್‌ಮುಖ್

ಜಾರ್ಜಿಯಾದ ಬಟುಮಿಯಲ್ಲಿ ಜು. 28 ರಂದು ನಡೆದ ಫಿಡೆ ಮಹಿಳಾ ವಿಶ್ವಕಪ್ 2025ರ ಫೈನಲ್‌ನಲ್ಲಿ 19 ವರ್ಷದ ಭಾರತದ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅನುಭವಿ ಗ್ರ್ಯಾಂಡ್‌ಮಾಸ್ಟರ್ ಕೊನೇರು ಹಂಪಿಯನ್ನು ಟೈಬ್ರೇಕ್‌ನಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಗೆಲುವಿನೊಂದಿಗೆ, ದಿವ್ಯಾ ಭಾರತದ ಮೊದಲ ಮಹಿಳಾ ವಿಶ್ವಕಪ್ ವಿಜೇತೆಯಾಗಿದ್ದಾರೆ ಮತ್ತು ದೇಶದ 88ನೇ ಗ್ರ್ಯಾಂಡ್‌ಮಾಸ್ಟರ್ (4ನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

24 ದಿನಗಳ ಕಾಲ ತೀವ್ರ ಸ್ಪರ್ಧೆಯ ನಂತರ, ದಿವ್ಯಾ ದೇಶಮುಖ್ ಫೈನಲ್‌ನಲ್ಲಿ ಕೊನೆರು ಹಂಪಿಯನ್ನು ಟೈಬ್ರೇಕ್‌ನಲ್ಲಿ ಸೋಲಿಸಿದರು. ಜು. 26 ಮತ್ತು ಜು. 27ರಂದು ಎರಡು ಕ್ಲಾಸಿಕಲ್ ಗೇಮ್ಸ್ ಡ್ರಾದಲ್ಲಿ ಕೊನೆಗೊಂಡಿದ್ದವು, ಇದರಿಂದ ಪಂದ್ಯವು ಜುಲೈ 28ರಂದು ರ‍್ಯಾಪಿಡ್ ಟೈಬ್ರೇಕ್‌ಗೆ ತೆರಳಿತು. ರ‍್ಯಾಪಿಡ್ ಟೈಬ್ರೇಕ್‌ನ ಮೊದಲ ಗೇಮ್ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಎರಡನೇ ರ‍್ಯಾಪಿಡ್ ಗೇಮ್​​ನಲ್ಲಿ ದಿವ್ಯಾ 1.5-0.5ರಿಂದ ಗೆಲುವು ಸಾಧಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0