ಥೈಲ್ಯಾಂಡ್‌ನಿಂದ ಬಂದ ನಟ ದರ್ಶನ್‌ಗೆ ಸರ್ಕಾರಿ ಭದ್ರತೆ! ಗೃಹಸಚಿವರಿಗೇ ಗೊತ್ತಿಲ್ವಂತೆ!
‘ದಿ ಡೆವಿಲ್’ ಸಿನಿಮಾದ ಶೂಟಿಂಗ್‌ಗೆಂದು ಕೋರ್ಟ್‌ನಿಂದ ಅನುಮತಿ ಪಡೆದು ವಿದೇಶಕ್ಕೆ ಹೋಗಿದ್ದರು ದರ್ಶನ್. ಇದೀಗ ಶೂಟಿಂಗ್ ಮುಗಿದಮೇಲೆ ಅವರು ಅಲ್ಲಿಂದ ವಾಪಸ್ ಆಗಿದ್ದಾರೆ.ಜುಲೈ 25ರ ರಾತ್ರಿ 11:45ರ ಸುಮಾರಿಗೆ ವಿಮಾನದಲ್ಲಿ ಥೈಲ್ಯಾಂಡ್‌ನಿಂದ ಹಿಂತಿರುಗಿದ್ದಾರೆ. ಆದರೀಗ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ದರ್ಶನ್‌ಗೆ ಅಲ್ಲಿ ಭದ್ರತೆ ನೀಡಲಾಗಿತ್ತು.
ಬಿಗಿ ಭದ್ರತೆಯಲ್ಲಿ ದರ್ಶನ್ ಅವರು ಟರ್ಮಿನಲ್‌ನಿಂದ ಕಾರ್‌ವರೆಗೆ ಬಂದಿದ್ದಾರೆ. ವಾಪಸ್ ಬಂದ ನಟನಿಗೆ ಸಿಐಎಸ್‌ಎಫ್ ಸಿಬ್ಬಂದಿ ಬಿಗಿ ಭದ್ರತೆ ನೀಡಲಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಹಾಗೂ ಪರ ವಿರೋಧಗಳು ಚರ್ಚೆಯಾಗುತ್ತಿವೆ.
ಇದೀಗ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ದರ್ಶನ್‌ಗೆ ನೀಡಿದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ನನಗೆ ಗೊತ್ತಿಲ್ಲ , ಅವರು ಭದ್ರತೆ ಕೊಟ್ಟಿದ್ದರಾ ಇಲ್ವ ಅಂತಾ. ಬೇರೆ ರೀತಿಯಲ್ಲಿ ಮಾಡೀದ್ದಾರಾ ಏನು ಅಂತ ಗೊತ್ತಿಲ್ಲ. ಅದನ್ನು ನಾನು ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.
ಜುಲೈ 24 ರಂದು ಸುಪ್ರೀಂ ಕೋರ್ಟ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅದನ್ನು ರದ್ದು ಮಾಡುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ. ಇದರೊಂದಿಗೆ ಜಾಮೀನು ರದ್ದಾಗುವ ಸಾಧ್ಯತೆ ಬಗ್ಗೆ ಆರೋಪಿಗಳಲ್ಲಿ ಆತಂಕ ಎದುರಾಗಿದೆ. ಹೈಕೋರ್ಟ್ ನೀಡಿರುವ ತೀರ್ಪನ್ನು “ಅಧಿಕಾರ ವ್ಯಾಪ್ತಿಯ ವಿಕೃತ ಬಳಕೆ” ಎಂದು ಸಿಜೆಐ ಗವಾಯಿ ಅವರು ಟೀಕಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



