5 ದೇಶಗಳಿಗೆ ಮೋದಿ ಪ್ರವಾಸಕ್ಕೆ ₹67 ಕೋಟಿ ವೆಚ್ಚ, 2021ರಿಂದ 2024ರ ವರಗಿನ ಒಟ್ಟು ವೆಚ್ಚ ₹295 ಕೋಟಿ

Jul 26, 2025 - 11:06
5 ದೇಶಗಳಿಗೆ ಮೋದಿ ಪ್ರವಾಸಕ್ಕೆ ₹67 ಕೋಟಿ ವೆಚ್ಚ, 2021ರಿಂದ 2024ರ ವರಗಿನ ಒಟ್ಟು ವೆಚ್ಚ ₹295 ಕೋಟಿ

ನವದೆಹಲಿ: ಅಮೆರಿಕ ಹಾಗೂ ಫ್ರಾನ್ಸ್‌ಗೆ ನೀಡಿದ ಭೇಟಿಯೂ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ವರ್ಷ ವಿವಿಧ ದೇಶಗಳಿಗೆ ಕೈಗೊಂಡಿರುವ ಪ್ರವಾಸಕ್ಕೆ ಈ ವರೆಗೆ ₹67 ಕೋಟಿ ವೆಚ್ಚವಾಗಿದೆ.

2021ರಿಂದ 2024ರ ವರಗಿನ ಅವಧಿಯಲ್ಲಿ ಅವರು ಕೈಗೊಂಡಿದ್ದ ವಿದೇಶ ಪ್ರವಾಸಗಳಿಗೆ ತಗುಲಿದ ಒಟ್ಟು ವೆಚ್ಚ ₹295 ಕೋಟಿ ಎಂದು ಕೇಂದ್ರ ಸರ್ಕಾರ ನೀಡಿರುವ ದತ್ತಾಂಶ ಹೇಳುತ್ತವೆ.

ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅವರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಆದರೆ, ಮಾರಿಷಸ್‌, ಸೈಪ್ರಸ್‌, ಕೆನಡಾ, ಕ್ರೊಯೇಷಿಯಾ, ಘಾನಾ, ಟ್ರಿನಿಡಾಡ್‌ ಮತ್ತು ಟೊಬ್ಯಾಗೊ, ಅರ್ಜೆಂಟಿನಾ, ಬ್ರೆಜಿಲ್ ಹಾಗೂ ನಮೀಬಿಯಾಕ್ಕೆ ಈ ವರ್ಷ ನೀಡಿರುವ ಭೇಟಿಗೆ ಸಂಬಂಧಿಸಿದ ವೆಚ್ಚದ ಮಾಹಿತಿ ಲಭ್ಯವಿಲ್ಲ.

ಈ ವರ್ಷ ಕೈಗೊಂಡಿದ್ದ ಫ್ರಾನ್ಸ್‌ ಪ್ರವಾಸಕ್ಕೆ ₹25 ಕೋಟಿ ಖರ್ಚಾಗಿದೆ. ಇದು ಈ ವರ್ಷ ಮಾಡಲಾದ ಗರಿಷ್ಠ ವೆಚ್ಚವಾಗಿದೆ. 2023ರಲ್ಲಿ ಕೈಗೊಂಡಿದ್ದ ಅಮೆರಿಕ ಪ್ರವಾಸಕ್ಕೆ ₹22 ಕೋಟಿ ವೆಚ್ಚವಾಗಿತ್ತು ಎಂದು ಸಚಿವ ಸಿಂಗ್‌ ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0