ದಾರುನ್ನಜಾತ್ 15ನೇ ವಾರ್ಷಿಕ ಹಾಗೂ ಆಂಡ್ ನೇರ್ಚೆ ಆಗಸ್ಟ್ 27ಕ್ಕೆ: ಸುಲ್ತಾನುಲ್ ಉಲಮಾ ಘೋಷಣೆ
ವಿಟ್ಲ: ದಾರುನ್ನಜಾತ್ ಸಂಸ್ಥೆಯ 15ನೇ ವಾರ್ಷಿಕ ಹಾಗೂ ಸಂಸ್ಥೆಯ ಶಿಲ್ಪಿ ಮರ್ಹೂಮ್ ಶೈಖುನಾ ಅಬೂಬಕ್ಕರ್ ಉಸ್ತಾದ್ 6ನೇ ಆಂಡ್ ನೇರ್ಚೆಯನ್ನು ಇದೇ ಆಗಸ್ಟ್ 27ರಂದು ನಡೆಸಲು
ಖಾಝಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದ್ ದಿನಾಂಕವನ್ನು ಘೋಷಣೆ ಮಾಡಿದರು.
ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಈ ಪ್ರಯುಕ್ತ ಖಾಝಿ ಸುಲ್ತಾನುಲ್ ಉಲಮಾAP ಉಸ್ತಾದ್ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಮರ್ಕಝ್ ವಿದ್ಯಾಸಂಸ್ಥೆಯಲ್ಲಿ ಭೇಟಿ ಮಾಡಿ ಕಾರ್ಯಕ್ರಮದ ವಿವರಗಳನ್ನು ನೀಡಿದರು. ಆ ಬಳಿಕ ಉಸ್ತಾದ್ ದಿನಾಂಕ ಘೋಷಣೆ ಮಾಡಿದರು. ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥನೆ ನಡೆಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ, ಅಬ್ದುಲ್ ಖಾದರ್ ಫೈಝಿ, ಉಮಾರ್ ವಿಟ್ಲ, ಅಬ್ದುಲ್ ಹಕೀಮ್ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



