ನಾಳೆ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಲ್ಲಿ ಎಸ್‌ವೈಎಸ್ ಸೌಹಾರ್ದ ಸಂಚಾರ
"ಭಾಗವಹಿಸೋಣ, ಸೌಹಾರ್ದತೆ, ಸಾಮರಸ್ಯವನ್ನು ಎತ್ತಿ ಹಿಡಿಯೋಣ"
ಪುತ್ತೂರು: ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌಹಾರ್ದ ಸಂದೇಶಗಳನ್ನು ಹರಡುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಕರಾವಳಿಯ ನೆಲದಲ್ಲಿ 'ಸೌಹಾರ್ದ ಸಂಚಾರ' ಎಂಬ ಕಾರ್ಯಕ್ರಮವು ನಿನ್ನೆ ಕುಂದಾಪುರದಿಂದ ಚಾಲನೆಗೊಂಡು, ಕಾರ್ಕಳ, ಉಡುಪಿಯಾಗಿ ಹಾದು ಬಂದು ಇಂದು ದಕ್ಷಿಣ ವೆಸ್ಟ್ ಜಿಲ್ಲೆಯ ಪ್ರಮುಖ ಕೇಂದ್ರಗಳಿಗೆ ಆಗಮಿಸಲಿದೆ.
ನಾಳೆ ದಕ್ಷಿಣ ಕನ್ನಡ ಪ್ರಮುಖ 4 ಕೇಂದ್ರಗಳಿಗೆ ಆಗಮಿಸಲಿದ್ದು, ನಾಳೆ ಬೆಳಿಗ್ಗೆ 8:30ಕ್ಕೆ ಪುತ್ತೂರು ಎಳ್ಮುಡಿಯಿಂದ ಆರಂಭಗೊಂಡು ಕಿಲ್ಲೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಬೆಳಿಗ್ಗೆ 10:30 ಉಪ್ಪಿನಂಗಡಿ ಕೇಂದ್ರದ ಗಾಂಧಿ ಪಾರ್ಕ್‌ನಿಂದ ಸೌಹಾರ್ದ ಸಂಚಾರ ಆರಂಗೊಂಡು ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ತದನಂತರ ಅಪರಾಹ್ನ 1:00ಕ್ಕೆ ಕಡಬ ಕೇಂದ್ರದ ಬಾಜಿನಡಿಯಿಂದ ಆರಂಬಗೊಂಡು ಕಡಬ ಪೇಟೆಯಲ್ಲಿ ಪಾದ ಸಂಚರ ನಡೆಸಿ ಕಡಬ ಬಸ್ಸು ನಿಲ್ದಾನದ ಎದುರುಗಡೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ 4:30ಕ್ಕೆ ಸುಳ್ಯ ಬಸ್ ನಿಲ್ದಾಣದಿಂದ ಸೌಹಾರ್ದ ಸಂಚಾರವು ಆರಂಭಗೊಂಡು ಪೇಟೆಯಲ್ಲಿ ಸಂಚರಿಸಿ ಗಾಂಧಿನಗರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ಈ ಸಂಚಾರವು ಇಸ್ಲಾಮಿನ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ಸೌಹಾರ್ದ ಸಂಚಾರದಲ್ಲಿ ಸಾದಾತುಗಳು, ಉಲಮಾಗಳು, ಉಮರಾಗಳು, ಸ್ವಾಮೀಜಿಗಳು, ಫಾದರ್‌ಗಳು, ವಿವಿಧ ರಾಜಕೀಯ ನಾಯಕರು, ವಿವಿಧ ಸಂಘ ಸಂಸ್ಥೆಗಳ ನಾಯಕರು, ಪ್ರಗತಿಪರ ಕೃಷಿಕರು, ಸಾಮಾಜಿಕ ನೇತಾರರು, ಚಿಂತಕರು, ವೃತ್ತಿಪರರು, ಮಸೀದಿ-ದೇವಸ್ಥಾನ-ಚರ್ಚುಗಳ ಅಧ್ಯಕ್ಷರು ಪದಾಧಿಕಾರಿಗಳು, ವಿವಿಧ ಸುನ್ನಿ ಸಂಘಟನೆಯ ನಾಯಕರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಆದುದರಿಂದ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುನ್ನಿ ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಎಲ್ಲಾ ಕೇಂದ್ರಗಳಲ್ಲಿ ನಡೆಯುವ ಸೌಹಾರ್ದ ಸಂಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಮಳೆ ಬಂದರೂ ಎದೆಗುಂದದೆ ಸೌಹಾರ್ದತೆ, ಸಾಮರಸ್ಯವನ್ನು ಎತ್ತಿ ಹಿಡಿಯೋಣ.
ಯೂಸುಫ್ ಸಯೀದ್ ಪುತ್ತೂರು
(ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ)
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



