SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.
ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು SSF ಮುಂಡಾಜೆ ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 13 ಜುಲೈ 2025 ರಂದು ಮಸ್ ಲಕ್ ಮದರಸ ಮುಂಡಾಜೆಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ಮುಜಿಬುರ್ರಹ್ಮಾನ್ ಸಖಾಫಿ ಅಧ್ಯಕ್ಷತೆಯನ್ನು ಹಾಗೂ ಸ್ವಾಗತಿಸಿದರು.
ಈ ಕಾರ್ಯಕ್ರಮವನ್ನು ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿ ಇವರು ಉದ್ಘಾಟಿಸಿದರು
ಡಿವಿಷನ್ ಮೀಡಿಯಾ ಕಾರ್ಯದರ್ಶಿಯಾದ ಹಾಫಿಲ್ ಬಾಸಿತ್ ಹಿಮಮಿ ಸಖಾಫಿ ತರಗತಿ ಮಂಡನೆ ಮಾಡಿದರು
SYS ಮುಂಡಾಜೆ ಸರ್ಕಲ್ ಉಪಾಧ್ಯಕ್ಷರಾದ ಖಾಲೀದ್ ಮದನಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಡಿವಿಷನ್ ಕಾರ್ಯದರ್ಶಿಯಾದ ನಾಸೀರ್ ಪಡ್ಡಂದಡ್ಕ ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. SSF ಬೆಳ್ತಂಗಡಿ ಡಿವಿಷನ್ ನಾಯಕರು KMJ ಮತ್ತು SYS ಮುಂಡಾಜೆ ಸರ್ಕಲ್ ನಾಯಕರು, ಸೆಕ್ಟರ್ ವ್ಯಾಪ್ತಿಯ SSF ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.
ಡಿವಿಷನ್ ಕೋಶಾಧಿಕಾರಿ ಹಂಝ ಕಕ್ಕಿಂಜೆ ಧನ್ಯವಾದ ಮಾಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



