ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!

Jun 23, 2025 - 17:05
ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!

ಉತ್ತರ ಪ್ರದೇಶ: ನದಿಯ ದಡದಲ್ಲಿ ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಮೊಸಳೆಯೊಂದು ಬಾಲಕನನ್ನು ನದಿಯೊಳಗೆ ಎಳೆದೊಯ್ದ ಘೋರವಾದ ದುರಂತ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಉಮ್ರಿ ಬೇಗಮ್‌ಗಂಜ್‌ನ ಸೋನೌಲಿ ಮೊಹಮ್ಮದ್‌ಪುರ ಗ್ರಾಮ ಪಂಚಾಯತ್‌ನ ಭಿಕಾರಿಪುರ ಹತ್ತಿರ ಇರುವ ಘಾಘ್ರಾ ನದಿಯ ದಡದಲ್ಲಿ ಎಮ್ಮೆಯನ್ನು ಸ್ನಾನ ಮಾಡಿಸಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ಮೊಸಳೆಗೆ ಆಹಾರವಾದ ಬಾಲಕನನ್ನು 8 ನೇ ತರಗತಿಯಲ್ಲಿ ಓದುತ್ತಿರುವ ರಾಜಾ ಬಾಬು ಅಲಿಯಾಸ್ ನಾನ್ ಯಾದವ್ (13) ಎಂದು ಗುರುತಿಸಲಾಗಿದೆ.

ಭಾನುವಾರ ಮಧ್ಯಾಹ್ನ ರಾಜಾ ಬಾಬು ಘಾಘ್ರಾ ನದಿಯ ದಡದಲ್ಲಿ ಎಮ್ಮೆಯನ್ನು ಸ್ನಾನ ಮಾಡಿಸಲು ಹೋಗಿದ್ದರು. ರಾಜಾ ಬಾಬು ದಡದಲ್ಲಿ ನಿಂತು ಎಮ್ಮೆ ಮೈ ತೊಳೆಯುತ್ತಿರಬೇಕಾದರೆ ಇದ್ದಕ್ಕಿದ್ದಂತೆ ನದಿಯಿಂದ ಹೊರಬಂದು ಮೊಸಳೆಯೊಂದು ಅವನ ಕಾಲನ್ನು ಹಿಡಿದು ಜಗ್ಗಿದೆ. ಬಾಲಕ ಕೆಳಗೆ ಬೀಳುತ್ತಿದಂತೆಯೇ ಆತನ ಕುತ್ತಿಗೆಯನ್ನು ಹಿಡಿದು ಮೊಸಳೆ ನದಿಯ ನೀರಿನಲ್ಲಿ ಎಳೆದೊಯ್ದಿದೆ.

ಮೊಸಳೆಯ ಹಿಡಿತದಿಂದ ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನಾದರೂ ಸಫಲವಾಗಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಜನರು ಮೊಸಳೆಯಿಂದ ಬಿಡಿಸಲು ಪ್ರಯತ್ನಿಸಿದರು, ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಶೀಘ್ರದಲ್ಲೇ ಮೊಸಳೆ ಮಗುವಿನೊಂದಿಗೆ ಕಣ್ಮರೆಯಾಯಿತು ಎಂದು ಹೇಳಲಾಗುತ್ತಿದೆ.

ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳು ಬಲೆ ಹಾಕಿ ಮಗುವನ್ನು ಹುಡುಕಲು ಪ್ರಯತ್ನಿಸುತ್ತಿವೆ. ಆದರೆ ಬಾಲಕನ ಶವ ಇನ್ನು ಪತ್ತೆಯಾಗಿಲ್ಲ. ಇನ್ನು ಘಾಗ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ, ಮೊಸಳೆಗಳು ವಸತಿ ಪ್ರದೇಶಗಳ ಬಳಿ ಬರುವುದು ಸಾಮಾನ್ಯವಾಗಿದೆ ಎಂದು ಜನರು ಹೇಳುತ್ತಾರೆ.

ಸದ್ಯ ಘಟನೆಯ ವಿಡಿಯೋ ಮೊಬೈಲ್‌ ಫೋನ್‌ನಲ್ಲಿ ಸೆರೆಯಾಗಿದ್ದು, ಅದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://twitter.com/SachinGuptaUP/status/1936973701754355757?ref_src=twsrc%5Etfw%7Ctwcamp%5Etweetembed%7Ctwterm%5E1936973701754355757%7Ctwgr%5E89bf5708996d58ab78383a5923016a1498452009%7Ctwcon%5Es1_&ref_url=https%3A%2F%2Fjanaspandhan.com%2Fwhile-bathing-a-buffalo-on-riverbank-boy-dragged-by-crocodile%2F

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0