ಇರಾನ್ ಮೇಲೆ ಇಸ್ರೇಲ್ ದಾಳಿಯಿಂದ ವಿಕಿರಣಶೀಲ ಮತ್ತು ರಾಸಾಯನಿಕ ಸೋರಿಕೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಐಎಇಎ ಮಾಹಿತಿ
ವಿಯೆನ್ನಾ: ಇರಾನ್ ನ ನಟಾನ್ಜ್ ಪರಮಾಣು ಸೌಲಭ್ಯದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ವಿಕಿರಣಶೀಲ ಮತ್ತು ರಾಸಾಯನಿಕ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ)ಯ ಪ್ರಧಾನ ನಿರ್ದೇಶಕ ರಾಫೆಲ್ ಗ್ರಾಸಿ ಶುಕ್ರವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಟಾನ್ಜ್ ಪರಮಾಣು ಸೌಲಭ್ಯದ ಮೇಲಿನ ಭಾಗವನ್ನು ಇಸ್ರೇಲ್ ನಾಶಪಡಿಸಿದೆ. ಸೌಲಭ್ಯದ ಭೂಗತ ಪುಷ್ಟೀಕರಣ ವ್ಯವಸ್ಥೆಗಳಿಗೆ ಹಾನಿಯ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಆದರೆ ವಿದ್ಯುತ್ ನಿಲುಗಡೆ ಕೇಂದ್ರಾಪಗಾಮಿಗಳ(ಸೆಂಟ್ರಿಫ್ಯೂಜ್ಸ್) ಮೇಲೆ ಪರಿಣಾಮ ಬೀರಿರಬಹುದು. ಸ್ಥಳದಲ್ಲಿ ವಿಕಿರಣಶೀಲ ಮತ್ತು ರಾಸಾಯನಿಕ ಮಾಲಿನ್ಯವಿದೆ ಎಂದವರು ಹೇಳಿದ್ದಾರೆ.
What's Your Reaction?
Like
2
Dislike
1
Love
1
Funny
0
Angry
0
Sad
0
Wow
1



