ಭಾರೀ ಮಳೆ ಸಾಧ್ಯತೆ: ದ.ಕ., ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ

Jun 14, 2025 - 19:35
ಭಾರೀ ಮಳೆ ಸಾಧ್ಯತೆ: ದ.ಕ., ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದ.ಕ., ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಿದ್ದು, ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೆಡ್ ಅಲರ್ಟ್: ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಿರುವ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಆರೆಂಜ್ ಅಲರ್ಟ್?: ಹಾವೇರಿ, ಬೆಳಗಾವಿ, ಧಾರವಾಡ, ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಬೆಂಗಳೂರು ಪ್ರಾದೇಶಿಕ ಕೇಂದ್ರದ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ 9 ಸೆಂ.ಮೀ, ಉಡುಪಿಯಲ್ಲಿ 8 ಸೆಂ.ಮೀ, ಉಪ್ಪಿನಂಗಡಿ, ಗೇರುಸೊಪ್ಪ, ಭಟ್ಕಳ, ಪಣಂಬೂರು, ಬಸವನ ಬಾಗೇವಾಡಿ, ಬೆಳ್ತಂಗಡಿಗಳಲ್ಲಿ ತಲಾ 7 ಸೆಂ.ಮೀ, ಸಿದ್ದಾಪುರ, ಕುಂದಾಪುರ, ಗೋಕರ್ಣ, ಪುತ್ತೂರುಗಳಲ್ಲಿ ತಲಾ 6 ಸೆಂ.ಮೀ, ಮೂಡುಬಿದರೆ, ಕಾರ್ಕಳದಲ್ಲಿ ತಲಾ 5 ಸೆಂ.ಮೀನಷ್ಟು ಮಳೆಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0