ಪೇರಡ್ಕ ಸೇತುವೆಗೆ ಅಡ್ಡವಾಗಿ ಬಿದ್ದ ಮರ: ಪಂಚಾಯತ್ ಹಾಗೂ ಅರಣ್ಯಾಧಿಕಾರಿ ನಿರ್ದೇಶನದಂತೆ ಸಾಹಸಮಯವಾಗಿ ಮರವನ್ನು ತೆರವುಗೊಳಿಸಿದ SჄS ಇಸಾಬ ಸಾಂತ್ವನ ತಂಡ

Jun 5, 2025 - 10:09
ಪೇರಡ್ಕ ಸೇತುವೆಗೆ ಅಡ್ಡವಾಗಿ ಬಿದ್ದ ಮರ: ಪಂಚಾಯತ್ ಹಾಗೂ ಅರಣ್ಯಾಧಿಕಾರಿ ನಿರ್ದೇಶನದಂತೆ ಸಾಹಸಮಯವಾಗಿ ಮರವನ್ನು ತೆರವುಗೊಳಿಸಿದ SჄS ಇಸಾಬ ಸಾಂತ್ವನ ತಂಡ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಸಮೀಪದ ಪೇರಡ್ಕ ಸೇತುವೆಯ ಮೇಲೆ ಬೃಹದಾಕಾರದ ಮರವೊಂದು ಬುಡ ಸಮೇತ ಬಿದ್ದು ನೀರಿನ ಸಂಚಾರಕ್ಕೆ ತಡೆಯಾಗಿತ್ತು. ಅಪಾಯವನ್ನರಿತ ಊರಿನವರು ಗ್ರಾಮ ಪಂಚಾಯತ್ ಅಧಿಕೃತರಿಗೆ ಮಾಹಿತಿ ನೀಡಿದಾಗ ಪಂಚಾಯತ್  ಪಿಡಿಒ ಮತ್ತು ಅರಣ್ಯಾಧಿಕಾರಿ, ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಹಾಗೂ ಪಂಚಾಯತ್ ಸದಸ್ಯರಾದ ಸವಾದ್ ಗೂನಡ್ಕ ರವರುಗಳ ನಿರ್ದೇಶನದಂತೆ ಅಧಿಕೃತರು SჄS ಇಸಾಬ ಸಾಂತ್ವನ ತಂಡವನ್ನು ಸಂಪರ್ಕಿಸಿ ನುರಿತರನ್ನು ಕಳುಹಿಸಿ ಕೊಟ್ಟು ಅಪಾದಲ್ಲಿರುವ ಮರವನ್ನು ತೆರವುಗೊಳಿಸುವಂತೆ ತಿಳಿಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಕಲ್ಲುಗುಂಡಿ ಯೂನಿಟ್ SჄS ಇಸಾಬ ಸಾಂತ್ವನ ಕಾರ್ಯದರ್ಶಿ ಅಝೀಝ್ ಚಡಾವು ರವರ ನೇತೃತ್ವದಲ್ಲಿ ಸುಳ್ಯ ಝೋನ್ ಇಸಾಬ ಕಾರ್ಯದರ್ಶಿ ಅಬ್ದುಲ್ ರಝಾಕ್ ಅಲೆಕ್ಕಾಡಿ ಹಾಗೂ ಜಿಲ್ಲಾ ಇಸಾಬ ಸಾಂತ್ವನ ತಂಡದ ಸಿದ್ದೀಖ್ ಗೂನಡ್ಕ ರವರು ಹಾಗೂ ಆಪತ್ಬಾಂದವ ಉಸ್ಮಾನ್ ಪಾಂಡಿ, ಸಾಹಿಲ್ ದರ್ಖಾಸು ರವರ ಸಹಕಾರದೊಂದಿಗೆ ವೇಗವಾಗಿ ಹರಿಯುವ ನೀರಿನಲ್ಲಿ ಅಪಾಯವಾಗಿ ನಿಂತ ಮರವನ್ನು ಕಠಿಣ ಪ್ರಯತ್ನಪಟ್ಟು ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಈ ಸಂಧರ್ಭದಲ್ಲಿ ವಿಶ್ವನಾಥ್ ಪಂಚಮಿ, ಚಿದಾನಂದ ಮಾಸ್ತರ್, ಮೋಹನ್ ಆಚಾರಿ, ದನಪಾಲ ಪೇರಡ್ಕ, ಯೋಗೀಶ್ ದರ್ಖಾಸು, ಭಾರದ್ವಾಜ್, ಸಾದುಮೋನ್ ಪೇರಡ್ಕ, ಅಶ್ರಫ್ ಪೇರಡ್ಕ, ಉನೈಸ್ ಗೂನಡ್ಕ ರವರುಗಳು ಸಹಕರಿಸಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ವೆಂಕಟೇಶ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಸವಾದ್, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಗಣಪತಿ ಭಟ್ ರವರುಗಳು ಮತ್ತು ಊರಿನ ನಾಗರೀಕರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0