ಶಾಲೆಯಿಂದ ಮಕ್ಕಳನ್ನು ಕರೆತರುತ್ತಿದ್ದ ಸ್ಕೂಟರ್​ಗೆ ಬೊಲೆರೋ ವಾಹನ ಡಿಕ್ಕಿ: ತಾಯಿ ಸ್ಥಳದಲ್ಲೇ ಸಾವು, ಇಬ್ಬರು ಪುತ್ರಿಯರಿಗೆ ತೀವ್ರ ಗಾಯ!

Mar 15, 2025 - 15:17
ಶಾಲೆಯಿಂದ ಮಕ್ಕಳನ್ನು ಕರೆತರುತ್ತಿದ್ದ ಸ್ಕೂಟರ್​ಗೆ ಬೊಲೆರೋ ವಾಹನ ಡಿಕ್ಕಿ: ತಾಯಿ ಸ್ಥಳದಲ್ಲೇ ಸಾವು, ಇಬ್ಬರು ಪುತ್ರಿಯರಿಗೆ ತೀವ್ರ ಗಾಯ!

ಮಂಡ್ಯ: ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನ ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಅವರ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಕೊಳ್ಳೆಗಾಲ ರಸ್ತೆಯ ಕಣಿಗಲ್ ಹಳ್ಳದ ಬಳಿ ನಡೆದಿದೆ.

ಮಳವಳ್ಳಿ ತಾಲೂಕಿನ ಕುಂದೂರು ಗ್ರಾಮದ ಶಿಲ್ಫಾ (39) ಮೃತಪಟ್ಟವರು. ಇವರ 7 ವರ್ಷದ ಹಾಗೂ 5 ವರ್ಷದ ಇಬ್ಬರು ಮಕ್ಕಳಿಗೆ ತೀವ್ರವಾದ ಗಾಯಗಳಾಗಿವೆ.

ಶುಕ್ರವಾರ ಸಾಯಂಕಾಲ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಪರಿಣಾಮ ಶಿಲ್ಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರೂ ಮಕ್ಕಳನ್ನು ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶಿಲ್ಪಾ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0