ಮರಣ ವಾರ್ತೆ: ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ನಿಧನರಾದರು.
ವರ್ಕಾಡಿ: ಕೊಡ್ಲಮೊಗರು ಇಲ್ಲಿನ ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿಯಾಗಿಯೂ,ಕೋಶಾಧಿಕಾರಿಯೂ ಆಗಿ ಹತ್ತು ಹಲವು ವರ್ಷಗಳ ಕಾಲ ಸೇವೆ ಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ಸ್ವಗೃಹ ದಲ್ಲಿ ನಿಧನರಾದರು.
ಮೃತರು 1970 ರ ಕಾಲದಲ್ಲಿ ಪಲ್ಲೆದಪಡ್ಪು ನಲ್ಲಿ ಸಾಕ್ಷರಾದವರಲ್ಲಿ ಒಬ್ಬರಾಗಿದ್ದರು..ಅದರಿಂದ ಊರಿನ ಮಸೀದಿಯ ಕಾರ್ಯದರ್ಶಿ ಹುದ್ದೆಯಲ್ಲಿ ಬಹಳ ಹಿಂದಿನಿಂದಲೂ ಬಹಳ ನಿಯ್ಯತ್ ನಿಂದ ದುಡಿಯುತ್ತಿದ್ದರು ..ಮೃತರ ಅಂತಿಮ ಕ್ರಿಯೆಯ ನಂತರ ಇಂದು ಬೆಳ್ಳಗೆ 9 ಘಂಟೆಗೆ ಪಲ್ಲೆದ ಪಡ್ಪು ಮಸೀದಿಯ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆಯಿತು
ಮೃತರು ಪತ್ನಿ ಸಾರಮ್ಮ, ಮಕ್ಕಳಾದ ಉಸ್ಮಾನ್, ಅಬ್ದುಲ್ಲ (ಲುಲು ಮಜೀರ್ಪಳ್ಳ),ಮಜೀದ್ ಕೆ.ಜಿ.ಯನ್ (ವರ್ಕಾಡಿ ನ್ಯೂಸ್)ಮತ್ತು
,ಬಶೀರ್ ಹಾಗೂ ಆರು ಹೆಣ್ಣುಮಕ್ಕಳು ಅಳಿಯಂದಿರೂ ,ಸೊಸೆಯಂದಿರೂ ಮತ್ತು ಅಪಾರ ಬಂಧು- ಬಳಗ ವನ್ನು ಅಗಲಿದ್ದಾರೆ..ಮೃತರ ಮನೆಗೆ ಹಲವು ಧಾರ್ಮಿಕ, ರಾಜಕೀಯ ನಾಯಕರು ಬೇಟಿ ನೀಡಿ ಸಂತಾಪ ಸೂಚಿಸಿದರು..
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



