ಬಿಹಾರ: ದನ ಕಳ್ಳತನ ಆರೋಪದ ಮೇಲೆ ಭಯೋತ್ಪಾದಕರಿಂದ ಮುಸ್ಲಿಂ ಯುವಕನ ಹತ್ಯೆ, ಸಹೋದರ ಗಂಭೀರ
ಸರನ್: ಬಿಹಾರದ ಸರನ್ ಜಿಲ್ಲೆಯ ಛಪ್ರಾ ನಗರದ ಕಸಾಯಿ ಟೋಲಿ ಪ್ರದೇಶದಲ್ಲಿ ದನ ಕಳ್ಳತನ ಆರೋಪದ ಮೇಲೆ 50ಕ್ಕೂ ಹೆಚ್ಚು ಜನರ ಗುಂಪು ಸಹೋದರರಿಬ್ಬರ ಕ್ರೂರವಾಗಿ ಹಲ್ಲೆ ನಡೆಸಿದೆ.
ಪರಿಣಾಮವಾಗಿ, 22 ವರ್ಷದ ಝಾಕಿರ್ ಖುರೇಷಿ ಸಾವನ್ನಪ್ಪಿದ್ದು, ಅವರ ಸಹೋದರ ನಿಹಾಲ್ ಖುರೇಷಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಮೇ 11 ರಂದು ನಡೆದಿದ್ದು, ಗುಂಪು ಇಬ್ಬರನ್ನು ಹಗ್ಗದಿಂದ ಕಟ್ಟಿ, ಕಬ್ಬಿಣದ ರಾಡ್, ಕೋಲು, ಬ್ಯಾಟ್‌ಗಳಿಂದ ದಾಳಿ ನಡೆಸಿದೆ. ಈ ಗುಂಪು ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಝಾಕಿರ್ ರಕ್ಷಣೆಗಾಗಿ ಗುಂಪಿನೊಂದಿಗೆ ಬೇಡಿಕೊಳ್ಳುತ್ತಿರುವ ದೃಶ್ಯಗಳು ಜನರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ಸಂತ್ರಸ್ತರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾದರೂ, ಝಾಕಿರ್ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದು, ಅವರ ಸಹೋದರ ನಿಹಾಲ್ ಅವರ ಸ್ಥಿತಿ ಗಂಭೀರವಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಕುಮಾರ್ ಆಶೀಷ್ ಪ್ರಕಾರ, ಪಂಕಜ್ ಕುಮಾರ್ ಮತ್ತು ಮಿಂಟು ರೈ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸುಜಿತ್ ಕುಮಾರ್, ಪ್ರಿನ್ಸ್ ರೈ ಮತ್ತು ಪಪ್ಪು ರೈ ಅವರ ಹೆಸರುಗಳನ್ನು ಪೊಲೀಸರು ಉಲ್ಲೇಖಿಸಿದ್ದು, ನ್ಯಾಯಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



