ಸೋಫಿಯಾ ಕುರಿತು ವಿಜಯ್ ಶಾ ವಿವಾದಾತ್ಮಕ ಹೇಳಿಕೆ; ಬಿಜೆಪಿಯ ನಿಲುವಿಗೆ ದೇಶ ಕಾಯುತ್ತಿದೆ: ಮಾಯಾವತಿ

May 15, 2025 - 17:30
ಸೋಫಿಯಾ ಕುರಿತು ವಿಜಯ್ ಶಾ ವಿವಾದಾತ್ಮಕ ಹೇಳಿಕೆ; ಬಿಜೆಪಿಯ ನಿಲುವಿಗೆ ದೇಶ ಕಾಯುತ್ತಿದೆ: ಮಾಯಾವತಿ

ಲಖನೌ: ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶ ಬಿಜೆಪಿ ನಾಯಕ ಹಾಗೂ ಸಚಿವ ವಿಜಯ್ ಶಾ ವಿರುದ್ಧ ಬಿಜೆಪಿಯು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಹಿಸಿದರು.

ಸೇನೆಯ ಅಧಿಕಾರಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಕೇವಲ ಎಫ್‌ಐಆರ್ ಅಷ್ಟೇ ಅಲ್ಲ, ಸರಿಯಾದ ಶಿಕ್ಷೆಯಾಗಬೇಕು ಎಂದು ದೇಶದ ಜನರು ಕಾಯುತ್ತಿದ್ದಾರೆ ಎಂದರು.

‘ಆಪರೇಷನ್ ಸಿಂಧೂರ’ ಕುರಿತು ಜಗತ್ತಿಗೆ ತಿಳಿಸಿದ ಮುಸ್ಲಿಂ ಸಮುದಾಯದ ಮಹಿಳಾ ಸೇನಾಧಿಕಾರಿಯ ಕುರಿತು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ‌. ಬಿಜೆಪಿ ಸಚಿವ ವಿಜಯ್ ಶಾ ಹೇಳಿಕೆಯು, ಸೇನೆಯ ಶೌರ್ಯಕ್ಕೆ ನಾವು ಮಾಡುವ ಅವಮಾನ ಎಂದು ಹೇಳಿದರು.

ದೇಶದಲ್ಲಿ ಕೋಮುವಾದ, ಜಾತಿ ಜಾತಿಗಳ ನಡುವಿನ ಸಂಘರ್ಷ, ಅಶಾಂತಿ ಹೆಚ್ಚಾಗಿದೆ. ಇದು ದೇಶದ ಪ್ರಗತಿಗೆ ಮಾರಕ ಎಂದು ಕಿಡಿಕಾರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0