ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 32 ಏರ್​​ಪೋರ್ಟ್​​ಗಳು ಮತ್ತೆ ಪುನಾರಂಭ: ಎಎಐ ಘೋಷಣೆ

May 12, 2025 - 17:23
ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 32 ಏರ್​​ಪೋರ್ಟ್​​ಗಳು ಮತ್ತೆ ಪುನಾರಂಭ: ಎಎಐ ಘೋಷಣೆ

ನವದೆಹಲಿ: ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ದ ರೀತಿಯ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮುಚ್ಚಲಾಗಿದ್ದ 32 ಏರ್​​ಪೋರ್ಟ್​​​ಗಳನ್ನು ಈಗ ಪುನಾರಂಭಿಸಲಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಇಂದು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ತತ್​​ಕ್ಷಣದಿಂದಲೇ ಈ 32 ಏರ್​​ಪೋರ್ಟ್​​ಗಳು ವಿಮಾನ ಸೇವೆಗೆ ಲಭ್ಯ ಇರುತ್ತವೆ ಎಂದು ತಿಳಿಸಿದೆ.

‘2025ರ ಮೇ 15ರ ಬೆಳಗ್ಗೆ 5:29ರವರೆಗೂ ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ 32 ಏರ್​​ಪೋರ್ಟ್​​​ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈಗ ಈ ಏರ್​ಪೋರ್ಟ್​​ಗಳು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ತತ್​​ಕ್ಷಣದಿಂದ ಲಭ್ಯ ಇರುತ್ತದೆ. ಪ್ರಯಾಣಿಕರು ತಮ್ಮ ಫ್ಲೈಟ್ ಸ್ಥಿತಿಗತಿಯನ್ನು ನೇರವಾಗಿ ಏರ್​ಲೈನ್ಸ್ ಸಂಸ್ಥೆಯೊಂದಿಗೆ ಪರಿಶೀಲಿಸುವಂತೆ ಶಿಫಾರಸು ಮಾಡುತ್ತೇವೆ’ ಎಂದು ಏರ್ಪೋರ್ಟ್ಸ್ ಅಥಾರಿಟಿ ತಿಳಿಸಿದೆ.

ಮೇ 9ರಂದು ವಿಮಾನ ನಿಲ್ದಾಣಗಳ ಪ್ರಾಧಿಕಾರವು 32 ಏರ್​​ಪೋರ್ಟ್​​ಗಳಲ್ಲಿ ನಾಗರಿಕ ವಿಮಾನ ಹಾರಾಟವನ್ನು ನಿಲ್ಲಿಸಲು ಆದೇಶಿಸಿತ್ತು. ಬೆಂಗಳೂರು, ಚೆನ್ನೈ, ಮುಂಬೈ ಇತ್ಯಾದಿ ನಗರಗಳ ಏರ್​​ಪೋರ್ಟ್​​​ಗಳು ಸ್ಥಗಿತಗೊಂಡಿರಲಿಲ್ಲ. ಅಮೃತಸರ, ಚಂಡೀಗಡ, ಜೈಸಲ್ಮೇರ್, ಲೇಹ್, ಪಠಾಣಕೋಟ್, ಪೋರಬಂದರ್, ಶ್ರೀನಗರ, ಶಿಮ್ಲಾ ಮೊದಲಾದ ಭಾರತ-ಪಾಕ್ ಗಡಿಭಾಗದ ಪ್ರದೇಶಗಳಲ್ಲಿರುವ ಸ್ಥಳಗಳಲ್ಲಿನ ಏರ್​​ಪೋರ್ಟ್​​​ಗಳನ್ನು ಮಾತ್ರವೇ ನಾಗರಿಕ ವಿಮಾನ ಸೇವೆಗೆ ನಿರ್ಬಂಧಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0