ಪಾರ್ಕಿಂಗ್ ಶುಲ್ಕ ಹೆಚ್ಚಿಸಿದ ಬೆಂಗಳೂರು ಏರ್‌ಪೋರ್ಟ್! 10 ನಿಮಿಷಕ್ಕೆ 250 ರೂ.
ಇತ್ತೀಚೆಗಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣ (Kempegowda Airport Bengaluru) ಹೊಸ ಪಾರ್ಕಿಂಗ್ ನಿಯಮ ಜಾರಿಗೆ ತಂದಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1 ರ ಆಗಮನ ದ್ವಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿತ್ತು. ಅಂದರೆ ಟರ್ಮಿನಲ್ 1 ರಲ್ಲಿ ಕಮರ್ಷಿಯಲ್ ಟ್ಯಾಕ್ಸಿಗಳಿಗೆ ಉಚಿತ ಪಾರ್ಕಿಂಗ್ ಸೇವೆಯನ್ನು 10 ನಿಮಿಷಕ್ಕೆ ನಿಗದಿ ಪಡಿಸಲಾಗಿತ್ತು, ಅಲ್ಲದೇ ಹೆಚ್ಚುವರಿ ನಿಮಿಷಕ್ಕೆ ಶುಲ್ಕವನ್ನೂ ವಿಧಿಸಲಾಗಿತ್ತು.
ಆದ್ರೆ ಈ ನಿಯಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಬೆಂಗಳೂರು ಏರ್‌ಪೋರ್ಟ್ ಈ ಸಮಯವನ್ನು 15 ನಿಮಿಷಕ್ಕೆ ವಿಸ್ತರಿಸುವ ಮೂಲಕ ಕ್ಯಾಬ್ ಚಾಲಕರಿಗೆ ಗುಡ್ ನ್ಯೂಸ್ ಕೊಟ್ಟಿತ್ತು. ಆದರೆ ಇದೀಗ ಸದ್ದಿಲ್ಲದೇ ಬೆಂಗಳೂರು ವಿಮಾನ ನಿಲ್ದಾಣ, ಕಾರ್ಪೋರೇಟ್ ಟ್ಯಾಕ್ಸಿಗಳಿಗೆ ಮೊದಲ 10 ನಿಮಿಷಕ್ಕೆ 275 ಪಿಕ್-ಅಪ್ ಶುಲ್ಕವನ್ನು ಜಾರಿಗೆ ತಂದಿದೆ. ಅಲ್ಲದೇ ಹೆಚ್ಚುವರಿ ಪ್ರತೀ 5 ನಿಮಿಷಕ್ಕೆ 150 ರೂ. ಹೆಚ್ಚಾಗಲಿದೆ ಎಂದು ವರದಿಯಾಗಿದೆ.
ಹೌದು, ಇದೀಗ ಕಾರ್ಪೋರೇಟ್ ಟ್ಯಾಕ್ಸಿಗಳಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಿಸಿ ಮುಟ್ಟಿಸಲು ಮುಂದಾಗಿದೆ. ಅಂದರೆ ವಿಮಾನ ನಿಲ್ದಾಣದಲ್ಲಿ ಕಾರ್ಪೋರೇಟ್ ಟ್ಯಾಕ್ಸಿಗಳಿಗೆ ಸದ್ದಿಲ್ಲದೇ 275 ರೂ. ಪಿಕಪ್ ಶುಲ್ಕವನ್ನು ಜಾರಿಗೆ ತಂದಿದೆ.
ಕಾರ್ಪೋರೇಟ್ ಟ್ಯಾಕ್ಸಿಗಳಿಗೆ ಶುಲ್ಕ ಪಕ್ಕಾ!
ಡಿಸೆಂಬರ್ 26 ರಂದು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಟರ್ಮಿನಲ್ 1 ರಲ್ಲಿ ನಿರ್ಗಮನ ಲೈನ್‌ನಲ್ಲಿ ಮೀಸಲಾದ 5ನೇ ಲೇನ್‌ನಿಂದ ಪ್ರಯಾಣಿಕರನ್ನು ಕರೆದೊಯ್ಯಲು ಕಾರ್ಪೊರೇಟ್ ಟ್ಯಾಕ್ಸಿಗಳಿಗೆ (ಯೆಲ್ಲೋ ಬೋರ್ಡ್ ವಾಹನ) 275 ರೂ.ಗಳಷ್ಟು ಪಿಕಪ್ ಶುಲ್ಕವನ್ನು ವಿಧಿಸುವುದಾಗಿ ಬಿಐಎಎಲ್ ಸ್ಪಷ್ಟನೆ ನೀಡಿದೆ.
ಇನ್ನು ಈ ಪಾರ್ಕಿಂಗ್ ಸ್ಥಳವನ್ನು ಪ್ರೀಮಿಯಂ ಪಿಕಪ್ ವಲಯ ಎಂದು ಕರೆಯಲಾಗುತ್ತಿದೆ. ಮೊದಲ 10 ನಿಮಿಷಕ್ಕೆ 275 ರೂ. ಶುಲ್ಕ ವಿಧಿಸಲಾಗುತ್ತದೆ, ಒಂದು ವೇಳೆ 5 ನಿಮಿಷ ಹೆಚ್ಚಾದರೂ 150 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ಬಿಐಎಎಲ್ ಅಧಿಕಾರಿ ತಿಳಿಸಿದ್ದಾರೆ. ಇನ್ನು ಹೆಚ್ಚುವರಿ ಶುಲ್ಕ, ಪಾರ್ಕಿಗ್ ಅವಧಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಬಿಐಎಎಲ್ ಕೂಡ ಈ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ. ಆದರೆ ಹೊಸ ಪಿಕಪ್ ನಿಯಮಗಳ ಬಗ್ಗೆ ವಿರೋಧ ವ್ಯಕ್ತವಾದ ಹೊರತಾಗಿಯೂ, ವಿಮಾನ ನಿಲ್ದಾಣದ ನಿರ್ವಾಹಕರು ಡಿಸೆಂಬರ್ 28 ರಿಂದ ಸದ್ದಿಲ್ಲದೇ ಹೊಸ ಶುಲ್ಕವನ್ನು ಜಾರಿಗೆ ತಂದಿದೆ ಎನ್ನಲಾಗಿದೆ.
ಇನ್ನು ಟರ್ಮಿನಲ್ 1 ರಲ್ಲಿ ಆಗಮನದ ಉಚಿತ ಪಾರ್ಕಿಂಗ್ ಸಮಯವನ್ನು ಬಿಐಎಎಲ್ ಡಿಸೆಂಬರ್ 26 ರಂದು ಪರಿಷ್ಕರಣೆ ನಡೆಸಿದೆ. ಹೊಸ ನಿಯಮದ ಪ್ರಕಾರ, ಟರ್ಮಿನಲ್ 1ರ P3 ಮತ್ತು P4 ರಲ್ಲಿ ಉಚಿತ ಪಾರ್ಕಿಂಗ್ ಸಮಯವನ್ನು 10 ನಿಮಿಷಗಳಿಂದ 15 ನಿಮಿಷಗಳಿಗೆ ವಿಸ್ತರಿಸಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



