ಈಶ್ವರಮಂಗಲ ತ್ವೈಬಾದಲ್ಲಿ ಸಂಪನ್ನಗೊಂಡ 'ಝೀಲ್ ಇಷ್ಕ್' ಪ್ರವಾದಿ ಪ್ರಕೀರ್ತನಾ ಮಜ್ಲಿಸ್
ಈಶ್ವರಮಂಗಲ: ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯ ಕೇಂದ್ರವಾದ ತ್ವೈಬಾ ಎಜುಕೇಶನಲ್ ಸೆಂಟರ್ ನಲ್ಲಿ, 'ತ್ವೀಬುಲ್ ಹಿಮ್ಮ' ಸ್ಟೂಡೆಂಟ್ಸ್ ಯೂನಿಯನ್ ವತಿಯಿಂದ ಆಯೋಜಿಸಲಾದ 'ಝೀಲ್ ಇಷ್ಕ್' ಬುರ್ದಾ ವಾರ್ಷಿಕೋತ್ಸವ ಮತ್ತು ಪ್ರವಾದಿ ಪ್ರಕೀರ್ತನಾ ಮಜ್ಲಿಸ್ ಡಿಸೆಂಬರ್ 17ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ಹಂಝ ಉಸ್ತಾದ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಉಪಸ್ಥಿತಿಯಲ್ಲಿ, ಹಾಫಿಲ್ ಕಬೀರ್ ಹಿಮಮಿ ಸ್ವಾಗತಿಸಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲತೀಫ್ ಸಖಾಫಿ ಮಾಡನ್ನೂರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಇಂತಹ ಮಜ್ಲಿಸ್‌ಗಳ ಮಹತ್ವವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರಖ್ಯಾತ ಬುರ್ದಾ ಗಾಯಕರಾದ ತ್ವಾಹ ತಂಙಳ್, ಶುಕೂರ್ ಇರ್ಫಾನಿ ಹಾಗೂ ಶಾಹಿನ್ ಬಾಬು ತಂಡದವರಿಂದ ಅತ್ಯಂತ ಸುಶ್ರಾವ್ಯವಾಗಿ ಪ್ರವಾದಿ ಪ್ರಕೀರ್ತನೆ ಮತ್ತು ಬುರ್ದಾ ಮಜ್ಲಿಸ್ ನಡೆಯಿತು.
ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಂಘಟನಾ ಚಾತುರ್ಯದಿಂದಾಗಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಜನಸಾಗರ ಹರಿದುಬಂದಿತ್ತು. ಆಗಮಿಸಿದ ಪ್ರತಿಯೊಬ್ಬರಿಗೂ ವಿಶೇಷ ಉಡುಗೊರೆ ನೀಡಲಾಯಿತು. ಮಜ್ಲಿಸ್‌ನಲ್ಲಿ ಪೋಷಕರು, ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



