ಆಡಗಲ್ಲ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಕಾ ಹಬ್ಬ ಆಚರಣೆ
ಬಾದಾಮಿ ತಾಲೂಕಿನ ಆಡಗಲ್ಲ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ನಲಿ ಕಲಿ ಮಕ್ಕಳ" ಗಣಿತ ಕಲಿಕಾ ಹಬ್ಬದ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹನಮಂತ ಕಾಟನ್ನವರ್ ಅಧ್ಯಕ್ಷತೆ ವಹಿಸಿದ್ದರು , ಅಜಿಂ ಪ್ರೇಂಜಿ ಫೌಂಡೇಶನ್ ದ ಸಂಪನ್ಮೂಲ ವ್ಯೆಕ್ತಿಯವರಾದ ತೃಷ್ಟಿ ಸಾಳ್ವಿ ಮೇಡಂ ರವರು ಮುಖ್ಯ ಅತಿಥಿಗಳ ಸ್ಥಾನವಹಿಸಿದ್ದರು , ಪಾಲಕ ಬಂಧುಗಳಾದ ಬಸವ್ವ ಜೋಗಿನ,ಶಿವಾನಂದ್ ಹಂಡೆನ್ನವರ್,ಯಲ್ಲವ್ವ ಜೋಗಿನ,ಮುತ್ತವ್ವ ಮುಕ್ಕಣ್ಣವರ ಭಾಗವಹಿಸಿದ್ದು ,ಶಾಲೆಯ ಶಿಕ್ಷಕರುಗಳಾದ ನಾಗನೂರ ಸರ್,ಪೂಜಾರ ಮಡಮ್,ವಂಕಲಕುಂಠಿ ಮೇಡಮ್, ಮನ್ನಾಪೂರ ಮೇಡಮ್, ಪರಡ್ಡಿ ಮೇಡಮ್, ಕೇಸರಿ ಮೇಡಮ್, ಕುಪ್ಪಸ್ತ ಮೇಡಮ್ ಅಂಗಡಿ ಮೇಡಂ ರವರುಗಳು ಕಾರ್ಯಕ್ರಮವನ್ನು ನಿಯೋಜನೆ ಮಾಡಿದ್ದರು,ಈ ಕಾರ್ಯಕ್ರಮದಲ್ಲಿ ಮಕ್ಕಳು ಮಿಮಿಕ್ರಿ,ಪಜಲ್ ಬಿಡಿಸುವುದು,ಮಗ್ಗಿ ಆಟ, ನಾನು ನನ್ನ ಕಾರ್ಡು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



