ಮೈಬೂಬಸಾಹೇಬ.ವೈ.ಜೆ.ಅವರು ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ ಆಯ್ಕೆ

Dec 17, 2025 - 09:37
ಮೈಬೂಬಸಾಹೇಬ.ವೈ.ಜೆ.ಅವರು ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ ಆಯ್ಕೆ

ಮೈಬೂಬಸಾಹೇಬ ಇವರಿಗೆ ಉರುಮಾಲ ಮಾಸ ಪತ್ರಿಕೆಯೂ, ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಡಿಸೆಂಬರ್-೨೧ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
     ಇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ ಬಿ.ಕೆ. ಗ್ರಾಮದವರಾಗಿದ್ದು, ಬಾಲ್ಯದಿಂದಲೇ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡು, ಕಥೆ,ಕವನ, ಗಜಲ್ ಬರೆಯುತ್ತಿದ್ದಾರೆ, ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಸಂದ್ಯಾಕಾಲ ಉದಯಕಾಲ, ಲೇಖನಿ, ಯಂತಹ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಜ಼ಾದ ಮಧಿರೆಯ ಸುತ್ತ ಎನ್ನುವ ಕೃತಿ ೨೦೨೩ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಪ್ರಕಟವಾಗಿದೆ.  ಇವರ ಕನ್ನಡ ಪರ ಕಾಳಜಿಯನ್ನು ಅರಿತು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರಿಗೆ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ಸೇವೆಗೆ ಸೇರಿಸಿಕೊಂಡಿದೆ. ಹೀಗೆ ಇವರ ಬಹುಮುಖ ಪ್ರತಿಭೆಯಾದ ಇವರ ಸಾಹಿತ್ಯಿಕ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉರುಮಾಲ ಮಾಸಿಕ ಪತ್ರಿಕೆಯ ಸಂಪಾದಕರು ತಿಳಿಸಿದ್ದಾರೆಂದು ಭೂಮಾತಾ ಹಾಗೂ ಅನ್ನದಾತ ಪ್ರಕಾಶನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0