ಬೆಳ್ಳಿಹಬ್ಬದ ಹೊಸ್ತಿಲಲ್ಲಿ ದುಲ್ ಫುಖಾರ್ ಸೇವಾ ಟ್ರಸ್ಟ್ ಡಿಸೆಂಬರ್ 24 25 ರಂದು ಐತಿಹಾಸಿಕ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ

Nov 24, 2025 - 09:41
ಬೆಳ್ಳಿಹಬ್ಬದ ಹೊಸ್ತಿಲಲ್ಲಿ ದುಲ್ ಫುಖಾರ್ ಸೇವಾ ಟ್ರಸ್ಟ್  ಡಿಸೆಂಬರ್ 24 25 ರಂದು ಐತಿಹಾಸಿಕ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ

ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕನ್ಯಾನದಲ್ಲಿ 25 ವರ್ಷಗಳ ಹಿಂದೆ ಬೆರಳೆಣಿಕೆಯ ಕೆಲವು ಯುವಕರಿಂದ  ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಬಡ ಮತ್ತು ಅನಾಥರ ಸೇವೆಯಲ್ಲಿ ಒಂದು ಹೆಜ್ಜೆ ಮುಂದೆ ನಿಂತು ಕಾರ್ಯಾಚರಿಸುತ್ತಿರುವ 2024 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿದೆ

ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಡಿನಾಡ ಪ್ರದೇಶಗಳಾದ ಕನ್ಯಾನ .ಕುಕ್ಕಾಜೆ, ಕರೋಪಾಡಿ ಬಾಗದಲ್ಲಿ  ಸ್ತುತ್ಯರ್ಹ ಸೇವೆಯನ್ನು ನೀಡುತ್ತಾ ಬರುತ್ತಿದೆ

 ಬಡ ಮತ್ತು ಅನಾಥರಾದ  ಮಕ್ಕಳ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದಿರುವ ಬಡ ಮತ್ತು ಅನಾಥರಾದ  ಅನೇಕಾರು ಕುಟುಂಬಗಳಿಗೆ ವೈದ್ಯಕೀಯ ಸೇವೆ, ಬಡ ಮತ್ತು ಅನಾಥರಾದ  ಹೆಣ್ಣು ಮಕ್ಕಳ ಮದುವೆ ಮನೆ ರಿಪೇರಿ ಮನೆ ನಿರ್ಮಾಣ ಮೊದಲಾದ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕನ್ಯಾನ ಭಾಗದಲ್ಲಿ ಮನೆಮಾತಾಗಿರುವ ಸಂಘಟನೆಯಾಗಿರುತ್ತದೆ ದುಲ್ ಫುಖಾರ್ ಸೇವಾ ಟ್ರಸ್ಟ್

ಯಶಸ್ವಿ 25 ವರ್ಷಗಳನ್ನು ಪೂರೈಸಿರುವ ಸಂಘಟನೆಯ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ 2025 ನೇ ಡಿಸೆಂಬರ್ 24, ಮತ್ತು 25 ರಂದು ವಿಜ್ರಂಭಣೆಯಿಂದ ನಡೆಯಲಿದೆ

ಕೇರಳ ಕರ್ನಾಟಕದ ಸುಪ್ರಸಿದ್ದ ವಾಗ್ಮಿಗಳು ಸಾದಾತುಗಳು ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಗಳು ಬಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿರುತ್ತಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0