ಗುಜರಾತ್‌: ಆಂಬ್ಯುಲೆನ್ಸ್‌ಗೆ ಬೆಂಕಿ ತಗುಲಿ ನವಜಾತ ಶಿಶು,ವೈದ್ಯರು ಸೇರಿದಂತೆ ನಾಲ್ವರು ಮೃತ್ಯು

Nov 18, 2025 - 14:49
ಗುಜರಾತ್‌: ಆಂಬ್ಯುಲೆನ್ಸ್‌ಗೆ ಬೆಂಕಿ ತಗುಲಿ ನವಜಾತ ಶಿಶು,ವೈದ್ಯರು ಸೇರಿದಂತೆ ನಾಲ್ವರು ಮೃತ್ಯು

ಅಹಮದಾಬಾದ್‌: ಗುಜರಾತ್‌ನ ಅರವಲ್ಲಿ ಜಿಲ್ಲೆಯ ಮೋಡಸಾ ಪಟ್ಟಣದ ಬಳಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ ಗೆ ಬೆಂಕಿ ಹೊತ್ತಿಕೊಂಡಿದ್ದು, ನವಜಾತ ಶಿಶು, ವೈದ್ಯರು ಸೇರಿ ನಾಲ್ವರು ಸಜೀವ ದಹನಗೊಂಡ ಘಟನೆ ಮಂಗಳವಾರ (ನ.18) ಬೆಳಗಿನ ಜಾವ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಡಸಾದ ಆಸ್ಪತ್ರೆಯಲ್ಲಿ ಜನನವಾಗಿದ್ದ ಒಂದು ದಿನದ ಶಿಶುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ ವಾಲಾ ತಿಳಿಸಿದ್ದಾರೆ.

ಆಂಬುಲೆನ್ಸ್‌ನಲ್ಲಿ ಶಿಶು, ತಂದೆ ಜಿಗ್ನೇಶ್ ಮೋಚಿ (38), ವೈದ್ಯ ಡಾ. ಶಾಂತಿಲಾಲ್ ರೆಂತಿಯಾ (30), ನರ್ಸ್‌ ಭುರಿಬೆನ್ ಮನತ್ (23),ಮೋಚಿಯ ಅವರ ಇಬ್ಬರು ಸಂಬಂಧಿಕರು ಮತ್ತು ಚಾಲಕ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸಲು ಮತ್ತು ದುರಂತಕ್ಕೆ ಕಾರಣವನ್ನು ಪತ್ತೆಮಾಡಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ ಸಿನ್ಹಾ ಜಡೇಜಾ ತಿಳಿಸಿದ್ದಾರೆ.

https://twitter.com/DeshGujarat/status/1990689336388722735?ref_src=twsrc%5Etfw%7Ctwcamp%5Etweetembed%7Ctwterm%5E1990689336388722735%7Ctwgr%5E7e22d44b00d18cd35ebfb96ea20487e18abf3ba6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0