ಇಂದು ರಾಜ್ಯಾಧ್ಯಂತ 'ಸರ್ಕಾರಿ ರಜೆ' ಘೋಷಿಸಿಲ್ಲ : ರಾಜ್ಯ ಸರ್ಕಾರ ಸ್ಪಷ್ಟನೆ

Nov 15, 2025 - 10:46
ಇಂದು ರಾಜ್ಯಾಧ್ಯಂತ 'ಸರ್ಕಾರಿ ರಜೆ' ಘೋಷಿಸಿಲ್ಲ : ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು: ಇಂದು ರಾಜ್ಯಾಧ್ಯಂತ ಸರ್ಕಾರಿ ರಜೆ ಇರುವುದಿಲ್ಲ. ಕೇವಲ ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಗೆ ಆದೇಶಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.

ನವೆಂಬರ್ 15 ರಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಾಲು ಮರದ ತಿಮ್ಮಕ್ಕ ಅವರ ನಿಧನದ ಕಾರಣದಿಂದಾಗಿ ಸರ್ಕಾರಿ ರಜೆ ಘೋಷಿಸಲಾಗಿದೆ ಎನ್ನುವಂತ ಆದೇಶ ಪತ್ರವೊಂದು ವೈರಲ್ ಆಗಿತ್ತು.

ಆದರೇ ಇದು ಎಸ್ ಎಂ ಕೃಷ್ಣ ಅವರು ಮರಣ ಹೊಂದಿದ ಆದೇಶವನ್ನು ತಿರುಚಿ ಹಾಕಲಾಗಿದೆ. ಆ ಆದೇಶದ ಕೆಳಗೆ ಸಹಿ ಮಾಡಿದ ಅಧಿಕಾರಿಯು ಪ್ರಸ್ತುತ ಆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?

ವೃಕ್ಷಮಾತೆ ನಾಡೋಜ, ಪದ್ಮಶ್ರೀ ಪುರಸ್ಕೃತರು ಹಾಗೂ ಕರ್ನಾಟಕದ ಪರಿಸರ ರಾಯಭಾರಿ ಡಾ.ಸಾಲುಮರದ ತಿಮ್ಮಕ್ಕ ಅವರು ದಿನಾಂಕ 14-11-2025ರಂದು ನಿಧನರಾಗಿರುತ್ತಾರೆ. ಅವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಆದರೇ ನಾಳೆ ರಾಜ್ಯಾಧ್ಯಂತ ಸರ್ಕಾರಿ ರಜೆಯನ್ನು ಘೋಷಿಸಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0