ಇಂದು ಮಗ್ರಿಬ್ ನಮಾಜಿನ ಬಳಿಕ ಅನಸ್ ಅಮಾನಿ ಉಸ್ತಾದ್ ಕುಂಬ್ರಕ್ಕೆ

Nov 4, 2025 - 15:43
Nov 4, 2025 - 15:45
ಇಂದು ಮಗ್ರಿಬ್ ನಮಾಜಿನ ಬಳಿಕ ಅನಸ್ ಅಮಾನಿ ಉಸ್ತಾದ್ ಕುಂಬ್ರಕ್ಕೆ

ಪುತ್ತೂರು: ಎಸ್‌ವೈಎಸ್ ಪುತ್ತೂರು ಝೂನ್ ನ  7 ವಲಯಗಳಿಗೆ ಒಳಪಟ್ಟ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಂಗಮ ಹಾಗೂ ಸಂಘಟನಾ ತರಬೇತಿ ಕಾರ್ಯಕ್ರಮ ನ.4ರಂದು ಸಂಜೆ 5.30ಕ್ಕೆ ಕುಂಬ್ರ ಪರ್ಪುಂಜದಲ್ಲಿರುವ ಅಡ್ ಮಲ್ಟಿಪ್ಲೆಕ್ಸ್‌ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ಲಕಾವು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಯುವ ಸಮೂಹವನ್ನು ದೇಶದ ಉತ್ತಮ ಪ್ರಜೆಗಳಾಗಿ ಪರಿವರ್ತಿಸಿ ಅವರಲ್ಲಿ ದೇಶ ಪ್ರೇಮ, ಉತ್ತಮ ಗುಣನಡತೆ, ಪರೋಪಕಾರಿ, ಸರ್ವಧರ್ಮ ಸಹಿಷ್ಣುತೆ, ಸೌಹಾರ್ದ ಮನೋಭಾವ ಸೃಷ್ಟಿಸಿ, ಆಧ್ಯಾತ್ಮಿಕವಾಗಿಯೂ ಅವರು ಉನ್ನತ ಮಟ್ಟದಲ್ಲಿ ತಲುಪಲು ಸಹಕಾರವಾಗುವ ಸಂಘಟನಾ ತರಬೇತಿ ನೀಡುವ ಎಸ್‌ವೈಎಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದ್ದು, ಅಸ್ಸಯ್ಯದ್ ಉಮರ್ ಜಿಫ್ರಿ ತಂಜಳ್ ಮಲಪ್ಪುರಂ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್‌ ವೈಎಸ್‌ ಪುತ್ತೂರು ಝೂನ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಸ್ವಾಗತ ಸಮಿತಿ ನಿರ್ದೇಶಕ ಅಬೂಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ, ಸ್ವಾಗತ ಸಮಿತ ಕನ್ನಿನರ್ ಅಬ್ದುಲ್‌ ರಹಮಾನ್ ಹಿಮಮಿ ರೆಂಜ, ಕೋಶಾಧಿಕಾರಿ ಅಬ್ದುಲ್ ಕರೀಮ್ ಹಾಜಿ ಕಾವೇರಿ ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0