ಜಾತಿಗಣತಿ ಸರ್ವೇ ಅವಧಿ ವಿಸ್ತರಣೆ: ಶಿಕ್ಷಕರಿಗೆ ಮಧ್ಯಾಹ್ನದ ನಂತರ ಸಮೀಕ್ಷೆ ಮಾಡಲು ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
ರಾಜ್ಯದಲ್ಲಿ ಮಂಗಳವಾರಕ್ಕೆ (ಅ.7) ಅಂತ್ಯವಾಗಬೇಕಿದ್ದ ಸರ್ವೇ ಕಾರ್ಯವನ್ನು ಅ.12ರವರೆಗೂ, ಬೆಂಗಳೂರಿನಲ್ಲಿ 1 ವಾರ ತಡವಾಗಿರೋ ಕಾರಣ ಅ.24ರವರೆಗೂ ವಿಸ್ತರಿಸಲಾಗಿದೆ. ಅಲ್ಲದೇ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಾಲಾ ತರಗತಿ ಮುಗಿಸಿ, ಮಧ್ಯಾಹ್ನದ ನಂತರ ಸರ್ವೇ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಈವರೆಗೆ ಶೇ.80.39ರಷ್ಟು ಸಮೀಕ್ಷೆಯಾಗಿದ್ದು, 1.43 ಕೋಟಿ ಮನೆಗಳ ಪೈಕಿ 1.15 ಕೋಟಿ ಮನೆಗಳ ಸರ್ವೇ ಮುಗಿದೆ. ಈವರೆಗೆ 4.32 ಕೋಟಿ ಜನರು ಗಣತಿ ವ್ಯಾಪ್ತಿಗೆ ಬಂದಿದ್ದಾರೆ.
ಇನ್ನು, ಗಣತಿ ವೇಳೆ ಚಿನ್ನದ ಬಗ್ಗೆ ಪ್ರಶ್ನೆಗೆ ಡಿಸಿಎಂ ಡಿಕೆಶಿ ಆಕ್ಷೇಪ ಸಂಬಂಧ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ನನಗೆ ಅರ್ಥ ಆಗ್ತಿಲ್ಲ ಅಂದಿದ್ದಾರೆ. ಚಿನ್ನ ಎಷ್ಟಿದೆ ಅಂತ ಪ್ರಶ್ನೆ ಕೇಳಿಲ್ಲ. ಚಿನ್ನ ಇದೆಯೋ, ಇಲ್ವೋ ಅಂತಷ್ಟೇ ಕೇಳಿದ್ದೇವೆ. ಜೀವನಮಟ್ಟ ತಿಳಿದುಕೊಳ್ಳಲು ಇದು ಅಗತ್ಯ ಅಂದಿದ್ದಾರೆ. ಈ ಮಧ್ಯೆ, ಸಚಿವ ಸತೀಶ್ ಜಾರಕಿಹೊಳಿ ಕೂಡ 60 ಪ್ರಶ್ನೆಗಳು ಜಾಸ್ತಿ ಆಯ್ತು ಅಂತ ಆಕ್ಷೇಪಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



