ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯೋತ್ಸವ: ಸೆಪ್ಟೆಂಬರ್ 14 ಆದಿತ್ಯವಾರ

Sep 13, 2025 - 17:04
ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯೋತ್ಸವ: ಸೆಪ್ಟೆಂಬರ್ 14 ಆದಿತ್ಯವಾರ

ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯೋತ್ಸವ ಇದೇ ಬರುವ ಸೆಪ್ಟೆಂಬರ್ 14 ಆದಿತ್ಯವಾರ ಬೆಳಿಗ್ಗೆ ಪ್ರಾರಂಭಗೊಳ್ಳುತ್ತದೆ. 7:30ಕ್ಕೆ ಸರಿಯಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭ ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುತ್ತದೆ. 8:00ಗೆ ಸರಿಯಾಗಿ ಮಕ್ಕಳ ಸಂಸ್ಕೃತಿಕ ಕಲಾ ಸಾಹಿತ್ಯೋತ್ಸವ ಪ್ರಾರಂಭಗೊಳ್ಳುತ್ತದೆ.ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾ ಗೌರವ ಅಧ್ಯಕ್ಷರು ಹಾಗೂ ಭಟ್ಕಳದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ತಾಜುಸ್ಸುನ್ನಃ ಅಕಾಡೆಮಿ ಇದರ ಅಧ್ಯಕ್ಷರು ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ ತಂಙಳ್,ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷರು ಇರ್ಷಾದ್ ಸಅದಿ ಉಸ್ತಾದರು, ಕಾರ್ಯದರ್ಶಿ ಸಲೀಂ ಬಟ್ಕಳ, ಫೈನಾನ್ಸ್ ಸೆಕ್ರೆಟರಿ ಸಲ್ಮಾನ್ ಹೊನ್ನಾವರ, ರಾಜ್ಯ ಎಕ್ಸಿಕ್ಯೂಟಿವ್ ಶಂಸುದ್ದೀನ್ ಅಹ್ಸನಿ ಉಸ್ತಾದ್ ಭಟ್ಕಳ ಹಾಗೂ ಇನ್ನಿತರ ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಅತ್ಯಂತ ವಿಕ್ರಂಬಣೆಯಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿವಿಧ ಕಡೆಯಲ್ಲಿರುವ ಯುನಿಟ್ ಸ್ಪರ್ಧಾರ್ಥಿಗಳು ಹಾಗೂ ಕಾರ್ಯಕರ್ತರು ನಾಯಕರನ್ನೊಳಗೊಂಡ ತಂಡವೂ ಸೆಪ್ಟೆಂಬರ್ 14 ಆದಿತ್ಯವಾರ ಬೆಳಗ್ಗೆ ಆಗುವಾಗ ಹೊನ್ನಾವರದ ಗೇರುಸೊಪ್ಪ ಪ್ರದೇಶಕ್ಕೆ ತಲುಪುತ್ತದೆ. ಸಾಹಿತ್ಯೋತ್ಸವದ ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ನ್ಯಾಷನಲ್ ಸೆಕ್ರೆಟರಿ ನವಾಝ್ ಭಟ್ಕಳ, ಹೊನ್ನಾವರ ತಾಲೂಕ್ ಪಿಎಸ್ಐ, ಸರ್ಕಲ್ ಇನ್ಸ್ಪೆಕ್ಟರ್, ನಗರಬಸ್ತಿಕೇರಿ ಪಂಚಾಯತ್ ಪಿಡಿಒ, ಪಂಚಾಯತ್ ಅಧ್ಯಕ್ಷರು, ಸಂಸಿ ತನ್ಝೀಂ ಅಧ್ಯಕ್ಷರು ಬಾವಾ ಫಖೀ ಮಸ್ತಾನ್ ಹಾಗೂ ಇನ್ನಿತರ ಜಮಾಅತಿನ ಗಣ್ಯ ವ್ಯಕ್ತಿಗಳು ಹಾಗೂ ಕಾರ್ಯಕರ್ತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಪಂಚಾಯತಿನ ಗೇರುಸೊಪ್ಪ ಎಂಬ ಪ್ರದೇಶದಲ್ಲಿ ಈ ನಾಡಿನ ಗಣ್ಯ ವ್ಯಕ್ತಿಗಳು ಹಾಗೂ ಕಾರ್ಯಕರ್ತರ ಸಹಕಾರದಿಂದ ನಡೆಯಲಿಕ್ಕಿದೆ. ಸರ್ವರಿಗೂ ಹಾಗೂ ಸರ್ವಧರ್ಮೀಯರಿಗೂ ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಬಯಸುತ್ತಿದ್ದೇವೆ. 

-ಎಸ್ಸೆಸ್ಸೆಫ್ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯೋತ್ಸವ ಸಮೀತಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1