ಮದ್ರಸ ಪಬ್ಲಿಕ್ ಪರೀಕ್ಷೆ : 5 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸನ ಮಡಂತ್ಯಾರು 600 ರಲ್ಲಿ 600 ಅಂಕ
ಮಡಂತ್ಯಾರು: 5 ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಫಾತಿಮತ್ ಸನ ಮಡಂತ್ಯಾರು 600 ರಲ್ಲಿ 600 ಅಂಕ.
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ, 5 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ ಈಸ್ಟ್ ಜಿಲ್ಲೆಯ, ಮಡಂತ್ಯಾರು ರೇಂಜ್ ವ್ಯಾಪ್ತಿಯ, ನೂರುಲ್ ಹುದಾ ಮದ್ರಸ ಮಡಂತ್ಯಾರು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸನ 600 ರಲ್ಲಿ 600 ಅಂಕ ಗಳಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ನೊಂದಿಗೆ ತೇರ್ಗಡೆ ಹೊಂದಿದ್ದಾಳೆ.
ಇವಳು, ಅಶ್ರಫ್ ಮತ್ತು ಸಬೀನ ದಂಪತಿಗಳ ಪುತ್ರಿ ಆಗಿರುತ್ತಾಳೆ. ವಿದ್ಯಾರ್ಥಿನಿ ಮತ್ತು ಇವಳ ಯಶಸ್ವೀ ಗೆ ಸಹಕರಿಸಿದ ತರಗತಿ ಅಧ್ಯಾಪಕರು ಸಹಿತ ಇತರ ಅಧ್ಯಾಪಕರಿಗೂ, ಆಡಳಿತ ಸಮಿತಿ ಹಾಗೂ ಜಮಾಅತರಿಗೆ ಕುಟುಂಬ ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ.
What's Your Reaction?
Like
4
Dislike
0
Love
1
Funny
0
Angry
0
Sad
0
Wow
1



