ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಒಬ್ಬ ಭಯಂಕರ ಭಯೋತ್ಪಾದಕ: ಉಮಾಭಾರತಿ ಅಚ್ಚರಿಯ ಹೇಳಿಕೆ

Aug 18, 2025 - 17:41
Aug 18, 2025 - 17:41
ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಒಬ್ಬ ಭಯಂಕರ ಭಯೋತ್ಪಾದಕ:  ಉಮಾಭಾರತಿ ಅಚ್ಚರಿಯ ಹೇಳಿಕೆ

ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ‘ಭಯಂಕರ ಭಯೋತ್ಪಾದಕ’ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಸಂಘಪರಿವಾರದ ನಾಯಕಿ ಉಮಾಭಾರತಿ ಕರೆದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾಭಾರತಿ ಗೋಡ್ಸೆಯ ಕೃತ್ಯವು ಭಯೋತ್ಪಾದನೆಯನ್ನು ಮೀರಿದ ದೊಡ್ಡ ಪಾಪ’ ಎಂದು ಹೇಳಿದರು. ಖಾಸಗಿ ಹಿಂದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಗೋಡ್ಸೆಯನ್ನು ತೀವ್ರವಾಗಿ ಟೀಕಿಸಿದರು ಮತ್ತು ಗಾಂಧೀಜಿಯನ್ನು ಹೊಗಳಿದರು.

‘ನಾಥೂರಾಮ್ ಗೋಡ್ಸೆ ಹಿಂದೂವೇ? ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ’ ಎಂದು ಉಮಾಭಾರತಿ ಹೇಳಿದರು. “ಸ್ವತಂತ್ರ ಭಾರತದ ದೊಡ್ಡ ಕನಸುಗಳನ್ನು ಹೊಂದಿದ್ದ ಗಾಂಧೀಜಿಯನ್ನು ಕೊಂದವನು ಗೋಡ್ಸೆ ವಿದೇಶಿ ಸಾಲಗಳನ್ನು ಅವಲಂಬಿಸದೆ ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು ಗಾಂಧೀಜಿಯವರ ಗುರಿಯಾಗಿತ್ತು. ಅಹಿಂಸಾತ್ಮಕ ಚಳುವಳಿಗಳನ್ನು ಜನಾಂದೋಲನಗಳಾಗಿ ಪರಿವರ್ತಿಸಿದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಸಾಟಿಯಿಲ್ಲ” ಎಂದು ಅವರು ಹೇಳಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0