SSF ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ-25: ಪ್ರಾದೇಶಿಕ ಸ್ವಾಗತ ಸಮಿತಿ ರಚನೆ
ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಷನ್ SSF(ರಿ) ನಡೆಸುವ ಕಲಾ ಸಂಭ್ರಮ ಸಾಹಿತ್ಯೋತ್ಸವವು ರಾಜ್ಯದಾದ್ಯಂತ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ.
ಎಸ್.ಎಸ್.ಎಫ್ ಪುತ್ತೂರು ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ಸೆಪ್ಟೆಂಬರ್ 7 ಆದಿತ್ಯವಾರದಂದು ದಾರುಲ್ ಇರ್ಷಾದ್ ಮಿತ್ತೂರಿನಲ್ಲಿ ನಡೆಯಲಿದೆ.
ಪ್ರಸ್ತುತ ಸಾಹಿತ್ಯೋತ್ಸವದ ಪ್ರಾದೇಶಿಕ ಸ್ವಾಗತ ಸಮಿತಿ ರಚನಾ ಸಭೆಯು ಆಗಸ್ಟ್ 3ರಂದು ಕೆ.ಜಿ.ಎನ್ ಮಿತ್ತೂರಿನಲ್ಲಿ ನಡೆಯಿತು.ಝೈನುಲ್ ಉಲಮಾ ಮಾಣಿ ಉಸ್ತಾದರ ದುಆ ದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಸಲಾಂ ಹನೀಫಿ ಉಸ್ತಾದರು ಸ್ವಾಗತಿಸಿದರು.ಸಿದ್ದೀಕ್ ಹಾಜಿ ಕಬಕ ಹಾಗೂ ಯೂಸುಫ್ ಸಈದ್ ನೇರಳಕಟ್ಟೆ ವಿಷಯ ಮಂಡನೆ ನಡೆಸಿದರು.
ಸಭೆಯಲ್ಲಿ ಡಿವಿಷನ್ ಸಾಹಿತ್ಯೋತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಲು ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಾಹಿತ್ಯೋತ್ಸವ ಸ್ವಾಗತ ಸಮಿತಿ:
ಸಲಹಾ ಸಮಿತಿ ನಾಯಕರಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್,ಸಯ್ಯದ್ ಸಾಬಿತ್ ಮುಈನಿ ಸಖಾಫಿ ತಂಙಳ್,ಹಂಝ ಮದನಿ ಮಿತ್ತೂರು,ಅಬೂದುಜಾನ ಸಖಾಫಿ ಕೊಡಿಪ್ಪಾಡಿ, ಕಾಸಿಂ ಹಾಜಿ ಪಾಟ್ರಕೋಡಿ, ಹಸೈನಾರ್ ಹಾಜಿ ಮಜ್‌ಮಾ,ಇಸ್ಮಾಈಲ್ ಹಾಜಿ ಹಸನ್ ನಗರ
ಚಯರ್‌ಮ್ಯಾನ್ ಯೂಸುಫ್ ಸಈದ್ ನೇರಳಕಟ್ಟೆ,ಜನರಲ್ ಕನ್ವೀನರ್ ಸಿದ್ದೀಕ್ ಹಾಜಿ ಕಬಕ,ಫಿನಾನ್ಸ್ ಕನ್ವೀನರ್ ಸಮೀರ್ ಕೊಡಿಪ್ಪಾಡಿ.
ವೈಸ್ ಚಯರ್‌ಮ್ಯಾನ್‌ಗಳಾಗಿ ಅಬ್ಬಾಸ್ ಮೆಸ್ಕಾಂ, ಹಮೀದ್ ಮೌಲಾ, ಯೂಸುಫ್ ಹಾಜಿ ಸೂರಿಕುಮೇರ್,ಸ್ವಾಲಿಹ್ ಮುರ, ಶಾಹುಲ್ ಹಮೀದ್ ಕಬಕ.
ಕನ್ವೀನರ್‌ಗಳಾಗಿ ಕರೀಂ ನೆಲ್ಲಿ,ಹೈದರ್ ಡೆಂಬಳೆ, ಶಾಹುಲ್ ಹಮೀದ್ ಪರ್ಲೋಟು, ಮಜೀದ್ ಕಬಕ, ಉಸ್ಮಾನ್ ಹಾಜಿ ಪದಂಜಾರ್.
ಫುಡ್ ಉಸ್ತುವಾರಿಗಳಾಗಿ ಬಶೀರ್ ಕರಿಮಜಲ್, ಫತಾವುಲ್ಲಾಹ್ ಕಬಕ,ಯೂಸುಫ್ ಕರಿಮಜಲ್
ವಾಲಂಟಿಯರ್ ಉಸ್ತುವಾರಿಗಳಾಗಿ ಸಾಜಿದ್ ಪಾಟ್ರಕೋಡಿ, ಮಜೀದ್ ಪಾಟ್ರಕೋಡಿ,ಉವೈಸ್ ಬೀಟಿಗೆ,ರಫೀಕ್ ಬೀಟಿಗೆ
ಮೀಡಿಯಾ ಉಸ್ತುವಾರಿಗಳಾಗಿ ಸಲೀಂ ಮಾಣಿ,ಶಿಹಾಬುರ್ರಹ್ಮಾನ್ ಹಸನ್ ನಗರ
ಸದಸ್ಯರುಗಳಾಗಿ ಉಮರ್ ಯುಎಸ್ ಕಬಕ,ಕುಞಿಮೋನು ಗೋವಾ,ಹೈದರ್ ಸಖಾಫಿ ಬುಡೋಳಿ,ಮುಹಮ್ಮದ್ ಹಬೀಬ್ ಶೇರಾ, ಅಬ್ಬಾಸ್ ಪರ್ಲೋಟು,ಉಮರುಲ್ ಫಾರೂಕ್ ಹನೀಫಿ ಪರ್ಲೋಟು,ದಾವೂದ್ ಕಲ್ಲಡ್ಕ, ಯೂಸುಫ್ ಪಾಟ್ರಕೋಡಿ,ಕಾಸಿಂ ಪಾಟ್ರಕೋಡಿ, ಇಬ್ರಾಹೀಂ ಹಾಜಿ ಶೇರಾ, ಇಬ್ರಾಹೀಂ ಕಬಕರವರನ್ನು ಆರಿಸಲಾಯಿತು.
SSF ಪುತ್ತೂರು ಡಿವಿಷನ್ ನಾಯಕರಾದ ಸಿನಾನ್ ಸಅದಿ ಪಾಳ್ಯತ್ತಡ್ಕ,ಉಸೈದ್ ಸಖಾಫಿ ಮಾಣಿ,ನಾಸಿರ್ ಕುಕ್ಕಾಜೆ,ಶಾಕಿರ್ ಕೊಳ್ತಿಗೆ,ಸಿನಾನ್ ಸಖಾಫಿ ಕಬಕ,ಬಶೀರ್ ಮೀನಾವು,ರಶೀದ್ ಸಖಾಫಿ ಹಾಗೂ ಅಹ್ಮದ್ ಮದೀನಿ ಅಜ್ಜಿಕಟ್ಟೆರವರು ಸಭೆಯಲ್ಲಿ ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



