ಚುನಾವಣೆಯಲ್ಲಿ ಅಕ್ರಮ: ದೇಶದ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ; ರಾಹುಲ್ ಗಾಂಧಿ
ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ‘ದೇಶ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ’ ಎಂದು ‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನ ಮತ್ತು ಮಾರ್ಗಗಳು’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಅವರು ‘ಅಲ್ಪ ಬಹುಮತ’ದೊಂದಿಗೆ ಅಧಿಕಾರದಲ್ಲಿದ್ದಾರೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ಆ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂಬುದು ನೆನಪಿರಲಿ ಎಂದು ರಾಹುಲ್ ಆರೋಪಿಸಿದರು.ಆರೋಪಿಸಿದರು.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಅಲ್ಲಿ ಮತದಾರರ ಪಟ್ಟಿಯಲ್ಲಿದ್ದವರ ಭಾವಚಿತ್ರಗಳು ಮತ್ತು ಮತದಾರರನ್ನು ನಮ್ಮ ಪಕ್ಷದವರು ಪರಿಶೀಲಿಸಿದ್ದಾರೆ. ಅಲ್ಲಿ 1.5 ಲಕ್ಷ ಮತದಾರರು ‘ನಕಲಿ’ ಎಂಬುದು ಈ ವೇಳೆ ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ದತ್ತಾಂಶವನ್ನು ಬಿಡುಗಡೆಯಾದರೆ ಚುನಾವಣಾ ವ್ಯವಸ್ಥೆ ಬಗ್ಗೆ ಆಘಾತ ಮೂಡಿಸುತ್ತದೆ. ಆ ದಾಖಲೆಗಳನ್ನು ಅಕ್ಷರಷಃ ‘ಆಟಂ ಬಾಂಬ್’ ಎಂದರೆ ತಪ್ಪಾಗದು ಎಂದು ಅವರು ಪ್ರತಿಪಾದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



