ಉತ್ತರ ಪ್ರದೇಶ: ಯೋಧನಿಗೆ ಕಾಲಿನಿಂದ ಒದ್ದು, ಹಿಗ್ಗಾಮುಗ್ಗಾ ಥಳಿಸಿದ ಕಾವಡ್ ಯಾತ್ರಿಗಳು
ಲಖನೌ: ಕಾವಡ್ ಯಾತ್ರಿಗಳ ಗುಂಪೊಂದು ಸಿಆರ್‌ಪಿಎಫ್ ಯೋಧನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಶನಿವಾರ ನಡೆದಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು, ಮಿರ್ಜಾಪುರ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಫ್ಲಾಟ್‌ಫಾಮ್‌ಗೆ ಬಂದ ಕೆಲವು ಕಾವಡ್ ಯಾತ್ರಿಗಳು ಟಿಕೆಟ್ ಖರೀದಿ ವಿಚಾರವಾಗಿ ಯೋಧನೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಅವರನ್ನು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದ್ದು ಮನಬಂದಂತೆ ಥಳಿಸಿದ್ದಾರೆ.
ಘಟನೆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕೇಸರಿ ಬಣ್ಣದ ವಸ್ತ್ರ ಧರಿಸಿದ ಸುಮಾರು ಏಳೆಂಟು ಮಂದಿ ಕಾವಡ್ ಯಾತ್ರಿಗಳು ಯೋಧನನ್ನು ಸುತ್ತುವರೆದಿದ್ದು, ಅವರನ್ನು ಹಿಡಿದು ಎಳೆಯುತ್ತಿರುವುದು, ಕಾಲಿನಿಂದ ಒದೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ಚಮನ್ ಸಿಂಗ್ ತೋಮರ್ ತಿಳಿಸಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



