SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

Jul 7, 2025 - 20:33
SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.

ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು SSF ಗುರುವಾಯನಕೆರೆ ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 06 ಜುಲೈ 2025 ರಂದು ಮದ್ದಡ್ಕ ಸುನ್ನೀ ಸೆಂಟರ್ ಕಛೇರಿಯಲ್ಲಿ ನಡೆಯಿತು. 
  ಸಯ್ಯದ್ ಶರಫುದ್ದೀನ್ ಅಲ್ ಹಾದಿ ತಂಙಳ್ ದುವಾ ನೇತೃತ್ವ ನೀಡಿದರು. ಸೆಕ್ಟರ್ ಕಾರ್ಯದರ್ಶಿಗಳಾದ ಇರ್ಷಾದ್ ಹಂದಾನಿ ಸ್ವಾಗತಿಸಿದರು.
ಈ ಕಾರ್ಯಕ್ರಮವನ್ನು N.S ಉಮರ್ ಮಾಸ್ಟರ್ ಮದ್ದಡ್ಕ ಉದ್ಘಾಟಿಸಿದರು
ಡಿವಿಷನ್  ಅಧ್ಯಕ್ಷರಾದ ಇಸಾಕ್ ಅಳದಂಗಡಿಯವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಭಾಷಣ ಅಬ್ಬೋನಾಕ ಮದ್ದಡ್ಕ ಮಾಡಿದರು. ಡಿವಿಷನ್ ಮಿಡಿಯಾ ಕಾರ್ಯದರ್ಶಿಯಾದ ಹಾಫಿಲ್ ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ ತರಗತಿ ಮಂಡನೆ ಮಾಡಿದರು ರಾಜ್ಯ WEFI ಕಾರ್ಯದರ್ಶಿಯಾದ  ರಶೀದ್ ಮಡಂತ್ಯಾರ್ ಹಾಗೂ ಡಿವಿಷನ್ ಕಾರ್ಯದರ್ಶಿಯಾದ ನಾಸೀರ್ ಪಡ್ಡಂದಡ್ಕ  ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. SSF ಬೆಳ್ತಂಗಡಿ  ಡಿವಿಷನ್ ನಾಯಕರು KMJ ಮತ್ತು SYS ಗುರುವಾಯನಕೆರೆ ಸರ್ಕಲ್ ನಾಯಕರು, ಸೆಕ್ಟರ್ ವ್ಯಾಪ್ತಿಯ SSF ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.
ಸೆಕ್ಟರ್ ಉಪಾಧ್ಯಕ್ಷರಾದ ಮಸೂದ್ ಸಖಾಫಿ  ಧನ್ಯವಾದ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0