ಮಅದನುಲ್ ಉಲೂಂ ಶೇರ ಮದ್ರಸಕ್ಕೆ ಗರಿ ವಿದ್ಯಾರ್ಥಿನಿಗೆ 100% ಅಂಕ
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 2024-2025 ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮಾಣಿ ರೇಂಜಿಗೊಳಪಟ್ಟ ಮಅದನುಲ್ ಉಲೂಂ ಶೇರ ಮದ್ರಸದ ವಿದ್ಯಾರ್ಥಿನಿ ಮರ್ಯಂ ಸ್ವಾಬಿರ (ಅಬ್ದುಲ್ ಲತೀಫ್ ಸಅದಿ & ಸೆಕೀನ ರವರ ಪುತ್ರಿ) ಇವರು 10 ನೇ ತರಗತಿಯಲ್ಲಿ ಉನ್ನತ ಶ್ರೇಣಿಯೊಂದಿಗೆ 100% (400/400) ಅಂಕ ಗಳಿಸಿ ಅಂತರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯದಲ್ಲೊಂದು ದಾಖಲೆ ಸೃಷ್ಟಿಸಿ ಇಡೀ ರಾಜ್ಯಕ್ಕೆ, ಮದರಸಕ್ಕೆ,ಊರಿಗೆ ಮತ್ತು ಕುಟುಂಬಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಈ ವಿದ್ಯಾರ್ಥಿನಿಗೆ ಹಾಗೂ ತಮ್ಮ ಪ್ರಯತ್ನಕ್ಕೆ ಶ್ರಮಿಸಿದ ಲತೀಫ್ ಸಅದಿ ಉಸ್ತಾದರಿಗೂ, ಮದ್ರಸ ಆಡಳಿತ ಸಮಿತಿಯವರಿಗೂ ಹೃದಯಾಂತರಾಳದ ಅಭಿನಂದನೆಗಳು.
ಬದ್ರಿಯ ಜುಮಾ ಮಸ್ಜಿದ್ ಆಡಳಿತ ಕಮಿಟಿ ಶೇರ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



