ಸಂವಿಧಾನದ ಪೀಠಿಕೆ ‘ಬದಲಾಯಿಸಲಾಗದು’, ಆದರೆ ತುರ್ತು ಪರಿಸ್ಥಿತಿ ವೇಳೆ ‘ಬದಲಾಯಿಸಲಾಗಿತ್ತು’: ಉಪ ರಾಷ್ಟ್ರಪತಿ

Jun 28, 2025 - 16:34
ಸಂವಿಧಾನದ ಪೀಠಿಕೆ ‘ಬದಲಾಯಿಸಲಾಗದು’, ಆದರೆ ತುರ್ತು ಪರಿಸ್ಥಿತಿ ವೇಳೆ ‘ಬದಲಾಯಿಸಲಾಗಿತ್ತು’: ಉಪ ರಾಷ್ಟ್ರಪತಿ

ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಬೇಕು ಎಂದು ಆರ್ ಎಸ್ ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಬೆನ್ನಲ್ಲೇ ದೇಶಾದ್ಯಂತ ಈ ಕುರಿತು ಚರ್ಚೆ ನಡೆಯುತ್ತಿರುವಂತೆಯೇ ದಾಖಲೆ ನಿರ್ವಹಣೆ ದೃಷ್ಟಿಯಿಂದ ‘ಸಂವಿಧಾನದ ಪ್ರಸ್ತಾಪನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಶನಿವಾರ ಪ್ರತಿಪಾದಿಸಿದ್ದಾರೆ.

ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ಸಂವಿಧಾನದ ಪೀಠಿಕೆಯು ಬದಲಾಗಿಲ್ಲ. ಆದರೆ 1976ರ 42ನೇ ಸಂವಿಧಾನ ತಿದ್ದುಪಡಿ ಕಾಯ್ದೆಯೊಂದಿಗೆ ಪೀಠಿಕೆಯನ್ನು ತಿದ್ದುಪಡಿ ಮಾಡಿದ್ದು, ಸಮಾಜವಾದಿ, ಜಾತ್ಯತೀತ ಮತ್ತು “ಸಮಗ್ರತೆ” ಪದಗಳನ್ನು ಸೇರಿಸಿದ್ದಾರೆ ಎಂದು ತಿಳಿಸಿದರು.

ಬಿ.ಆರ್. ಅಂಬೇಡ್ಕರ್ ಅವರು ಶ್ರಮವಹಿಸಿ ಸಂವಿಧಾನ ರಚಿಸಿದ್ದು, ನಾವು ಅದರತ್ತ ಖಂಡಿತವಾಗಿಯೂ ಗಮನ ಕೇಂದ್ರೀಕರಿಸಿರಬೇಕು ಎಂದು ಜಗದೀಪ್ ಧಂಖರ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು,ಇದು ರಾಜಕೀಯ ಅವಕಾಶವಾದವಾಗಿದೆ ಮತ್ತು ಸಂವಿಧಾನದ ಆತ್ಮದ ಮೇಲೆ ಉದ್ದೇಶಪೂರ್ವಕ ದಾಳಿಯಾಗಿದೆ ಎಂದು ಟೀಕಿಸಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0