ಬೆಂಗಳೂರು – ಲಂಡನ್‌ ಸೇರಿದಂತೆ ದಿಢೀರ್‌ 7 ಏರ್‌ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

Jun 18, 2025 - 09:30
ಬೆಂಗಳೂರು – ಲಂಡನ್‌ ಸೇರಿದಂತೆ ದಿಢೀರ್‌ 7 ಏರ್‌ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

ನವದೆಹಲಿ: ತಾಂತ್ರಿಕ ದೋಷ ಮತ್ತು ವಿಮಾನಗಳ ಲಭ್ಯತೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಟ್ಟು ಏಳು ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ.
ರದ್ದಾದ ವಿಮಾನಗಳಲ್ಲಿ ಆರು ಬೋಯಿಂಗ್ 787-8 ಡ್ರೀಮ್‌ಲೈನರ್‌ಗಳು (787 ಆಗಿದೆ.

ಯಾವೆಲ್ಲ ವಿಮಾನ ರದ್ದು?
AI915 – ದೆಹಲಿಯಿಂದ ದುಬೈ – B788 ಡ್ರೀಮ್‌ಲೈನರ್
AI153 – ದೆಹಲಿಯಿಂದ ವಿಯೆನ್ನಾ – B788 ಡ್ರೀಮ್‌ಲೈನರ್
AI143 – ದೆಹಲಿಯಿಂದ ಪ್ಯಾರಿಸ್ – B788 ಡ್ರೀಮ್‌ಲೈನರ್
AI159 – ಅಹಮದಾಬಾದ್‌ನಿಂದ ಲಂಡನ್ – B788 ಡ್ರೀಮ್‌ಲೈನರ್
AI170 – ಲಂಡನ್‌ನಿಂದ ಅಮೃತಸರ – B788 ಡ್ರೀಮ್‌ಲೈನರ್
AI133 – ಬೆಂಗಳೂರಿನಿಂದ ಲಂಡನ್ – B788 ಡ್ರೀಮ್‌ಲೈನರ್
AI179 – ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋ – B777

ದೆಹಲಿ-ಪ್ಯಾರಿಸ್‌ ಮಧ್ಯೆ ವಿಮಾನ ಲಭ್ಯವಿಲ್ಲದ ಕಾರಣ ರದ್ದಾಗಿದ್ದರೆ ಉಳಿದ ವಿಮಾನಗಳ ರದ್ದಿಗೆ ಕಾರಣ ತಿಳಿದು ಬಂದಿಲ್ಲ

ಜೂನ್ 12 ರಂದು ಅಹಮದಾಬಾದ್‌ನಲ್ಲಿ ದುರ್ಘಟನೆ ನಡೆದ ಬಳಿಕ ಏರ್ ಇಂಡಿಯಾ ತನ್ನ ವಿಮಾನಗಳಲ್ಲಿ ಅದರಲ್ಲೂ ವಿಶೇಷವಾಗಿ ಅದರ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್‌ನ ಸುರಕ್ಷತಾ ತಪಾಸಣೆಗಳನ್ನು ಹೆಚ್ಚಿಸಿದೆ.

ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ಅವರನ್ನು ಆದಷ್ಟು ಬೇಗ ಅವರು ತೆರಳಬೇಕಾದ ಜಾಗಗಳಿಗೆ ಅವರನ್ನು ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ನಾವು ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದೇವೆ. ಮರುಪಾವತಿ ಅಥವಾ ಉಚಿತ ಮರುಹೊಂದಿಸುವಿಕೆಯನ್ನು ಸಹ ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 1
Sad Sad 0
Wow Wow 0