ಪುತ್ರಿಯ ಮೇಲೆಯೇ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಪದಾಧಿಕಾರಿ- ಮಹಿಳೆ, ಆಕೆಯ ಪ್ರಿಯಕರ ಅರೆಸ್ಟ್

Jun 9, 2025 - 10:49
Jun 9, 2025 - 10:49
ಪುತ್ರಿಯ ಮೇಲೆಯೇ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಪದಾಧಿಕಾರಿ- ಮಹಿಳೆ, ಆಕೆಯ ಪ್ರಿಯಕರ ಅರೆಸ್ಟ್

ಡೆಹ್ರಾಡೂನ್: ಅಪ್ರಾಪ್ತ ಪುತ್ರಿಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಬಿಜೆಪಿಯ ಮಾಜಿ ಪದಾಧಿಕಾರಿ, ಸಂತ್ರಸ್ತೆಯ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.

ಆರೋಪಿತೆಯು ಬಿಜೆಪಿಯ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಳು. ಪತಿಯೊಂದಿಗೆ ಸಂಬಂಧ ಸರಿ ಬಂದಿಲ್ಲ ಎಂದು ಪ್ರತ್ಯೇಕವಾಗಿ ವಾಸವಿದ್ದಳು. ಈಕೆ ಪುತ್ರಿಯೊಂದಿಗೆ ಪ್ರಿಯಕರ ಸುಮಿತ್ ಪಟ್ವಾಲ್ ಎಂಬಾತನೊಂದಿಗೆ ವಾಸವಿದ್ದಳು. ಆಕೆಯ ಪುತ್ರ ಮಾಜಿ ಪತಿಯೊಂದಿಗೆ ಇದ್ದ.

ಅಪ್ರಾಪ್ತ ವಯಸ್ಸಿನ ಪುತ್ರಿಯು ತಂದೆಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭಯಾನಕ ಸತ್ಯ ಹೊರಬಿದ್ದಿದೆ. ಪುತ್ರಿಯ ಹತಾಶ ಮುಖವನ್ನು ನೋಡಿದ ತಂದೆ ಆಕೆಯ ಜತೆ ಮಾತುಕತೆ ನಡೆಸಿದಾಗ ಭಯಾನಕ ಅನುಭವವನ್ನು ತಂದೆಯ ಜತೆ ಹಂಚಿಕೊಂಡಿದ್ದಾಳೆ. ಮಂಗಳವಾರ ಸಂಜೆ ತಂದೆ, ಪುತ್ರಿಯನ್ನು ರಾಣಿಪುರ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದಾರೆ.

"ಕಳೆದ ಜನವರಿಯಲ್ಲಿ ಪುತ್ರಿಯನ್ನು ವಿಹಾರಕ್ಕೆ ಕರೆದೊಯ್ಯುವ ನೆಪದಲ್ಲಿ ಪತ್ನಿಯು ತನ್ನ ಪ್ರಿಯಕರ ಸುಮಿತ್ ಪಟ್ವಾಲ್ ಹಾಗೂ ಆತನ ಸ್ನೇಹಿತ ಶುಭಂ ಜತೆಗೆ ಬಿಎಚ್‍ಇಎಲ್ ಸ್ಟೇಡಿಯಂ ಪ್ರದೇಶಕ್ಕೆ ಕರೆದೊಯ್ದಿದ್ದಳು. ಅಲ್ಲಿ ಮದ್ಯಪಾನ ಮಾಡಿ ತಾಯಿಯ ಸಮ್ಮತಿಯೊಂದಿಗೆ ಇಬ್ಬರೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಗ್ರಾ, ವೃಂದಾವನ ಮತ್ತು ಹರಿದ್ವಾರದ ಹೋಟೆಲ್‍ಗಳಲ್ಲಿ ಇಂಥದ್ದೇ ಸಾಮೂಹಿಕ ಅತ್ಯಾಚಾರಗಳು ನಡೆದಿದ್ದವು ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನು ಬಹಿರಂಗಪಡಿಸಿದರೆ ಸಂತ್ರಸ್ತೆ ಮತ್ತು ತಂದೆಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು" ಎಂದು ದೂರಿನಲ್ಲಿ ವಿವರಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 1