ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿಯ ಕೊಲೆ ಯತ್ನ: ಕುಖ್ಯಾತ ರೌಡಿ ಶೀಟರ್ ಕೋಡಿಕೆರೆ ಲೋಕು ಅರೆಸ್ಟ್
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕುಂಟಿಕಾನ ಬಳಿ ಮೀನು ವ್ಯಾಪಾರಿ ಲುಕ್ಮಾನ್ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಕುಖ್ಯಾತ ರೌಡಿ ಶೀಟರ್ ಕೋಡಿಕೆರೆ ಲೋಕೇಶ್ ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಸಂದರ್ಭ ಬಡ ಮೀನು ವ್ಯಾಪಾರಿ ಲುಕ್ಮಾನ್ ನನ್ನು ಕುಂಟಿಕಾನದ ಬಳಿ ಅಟ್ಟಾಡಿಸಿಕೊಂಡು ಹೋಗಿದ್ದ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲ್ಲಲು ಪ್ರಯತ್ನಿಸಿದ್ದರು. ಅಲ್ಲಿಯೇ ಇದ್ದ ಮೀನು ವ್ಯಾಪಾರ ಮಾಡುವ ಮಹಿಳೆಯ ಸಮಯ ಪ್ರಜ್ಞೆಯಿಂದ ಲುಕ್ಮಾನ್ ಬಚವಾಗಿದ್ದ. ಇಲ್ಲವಾದರೆ ಅಮಾಯಕ ಯುವಕನೊಬ್ಬ ಬಲಿಯಾಗುತ್ತಿದ್ದ. ಈ ಕೇಸಿಗೆ ಸಂಬಂಧಿಸಿ ಕುಖ್ಯಾತ ರೌಡಿಶೀಟರ್ ಲೋಕೇಶ್ ನನ್ನು ಬಂಧಿಸಲಾಗಿದೆ. ಹತ್ಯೆಗೆ ಸುಹಾಸ್ ಶೆಟ್ಟಿ ಕೂಡಾ ಕೋಡಿಕೆರೆ ಗ್ಯಾಂಗ್ ನ ಸದಸ್ಯನಾಗಿದ್ದ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



