ಡಬ್ಲೂಪಿಲ್ ನಲ್ಲಿ ಆರ್ ಸಿಬಿಗೆ ಶುಭಾರಂಭ - ಮುಂಬೈ ವಿರುದ್ಧ ಭರ್ಜರಿ ಜಯ.!

Jan 10, 2026 - 09:54
ಡಬ್ಲೂಪಿಲ್ ನಲ್ಲಿ ಆರ್ ಸಿಬಿಗೆ ಶುಭಾರಂಭ - ಮುಂಬೈ ವಿರುದ್ಧ ಭರ್ಜರಿ ಜಯ.!

ಮಹಿಳೆಯರ ಪ್ರೀಮಿಯರ್ ಲೀಗ್ ಸೀಸನ್ 4 ಅದ್ಬುತ ಆರಂಭ ಪಡೆದಿದ್ದು, ಮೊದಲ ಪಂದ್ಯದಲ್ಲೇ ಆರ್ ಸಿಬಿ ತಂಡ ಮುಂಬೈ ವಿರುದ್ಧ ರೋಚಕ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಹಾಲಿ ಚಾಂಪಿಯನ್ಸ್ ಆರ್ ಸಿಬಿ ತ

ಮುಂಬೈ ತಂಡದ ಪರ ಸಜೀವನ್ ಸಜನಾ 45, ನಿಕೋಲಾ ಕ್ಯಾರಿ 40, ಗುಣಲನ್ ಕಮಲಿನಿ 32, ಹರ್ಮನ್‌ಪ್ರೀತ್‌ ಕೌರ್‌ 20 ರನ್‌ ಗಳಿಸಿದರು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಉತ್ತಮ ಆರಂಭ ಪಡೆಯಿತು.

ನಾಲ್ಕನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಗ್ರೇಸ್ ಹ್ಯಾರಿಸ್ 25, ನಾಯಕಿ ‌ ಸ್ಮೃತಿ ಮಂಧಾನಾ 18 ರನ್‌ ಗಳಿಸಿ ಔಟಾದರೆ. ನಂತರ ಬಂದ ಬ್ಯಾಟರ್‌ಗಳು ಎರಡಂಕಿ ಮೊತ್ತ ಕಲೆ ಹಾಕುವಲ್ಲಿ ವಿಫಲವಾದರು ತಂಡದ ಮೊತ್ತ 65 ರನ್‌ ಇರುವಾಗಲೇ 5 ವಿಕೆಟ್‌ಗಳು ಕಳೆದು ಕೊಂಡಿತ್ತು.

ಇನ್ನೇನು ಪಂದ್ಯ ಮುಗೀತು ಅನ್ನುವಷ್ಟರಲ್ಲಿ ಕ್ರಿಸ್ ಗೆ ಬಂದ ಅಲ್ ರೌಂಡರ್ ನಾಡಿನ್ ಡಿ ಕ್ಲರ್ಕ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ಗೆಲುವಿನ ಭರವಸೆ ಮೂಡಿಸಿದರು. ಕೇವಲ 44 ಎಸೆತಗಳಲ್ಲಿ 63 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿಗೆ ಕೊನೆಯ ಓವರ್‌ನಲ್ಲಿ 18 ರನ್ ಅವಶ್ಯಕತೆ ಇತ್ತು. ಈ ವೇಳೆ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಹೊಡೆಯುವ ಮೂಲಕ ಆರ್ ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಅಷ್ಟೇ ಅಲ್ಲ ಬೌಲಿಂಗ್ ನಲ್ಲಿ ಕೂಡ ಅತ್ಯದ್ಭುತ ಪ್ರದರ್ಶನ ನೀಡಿರುವನಾಡಿನ್ ಡಿ ಕ್ಲರ್ಕ್ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಬಳಿಸಿದರು. ಇವೊಂದು ಅಲ್ ರೌಂಡ್ ಪ್ರದರ್ಶನದ ಮೂಲಕ ಈ ಟೂರ್ನಿಯಲ್ಲಿ ಆರ್ ಸಿಬಿ ಶುಭಾರಂಭ ಕಂಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0