ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಕೇಸ್ : ಜ.22ಕ್ಕೆ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್
ಬೆಂಗಳೂರು: ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಬಡಾವಣೆಯಲ್ಲಿ ವಸತಿಗಳ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುನರ್ವಸತಿ ಪರಿಹಾರ ಕೋರಿ ಹೈಕೋರ್ಟಿಗೆ ಜೈಬಾ ತಬಸುಮ್ ಮತ್ತಿತರರು ಪಿಐಎಲ್ ಸಲ್ಲಿಸಿದ್ದು ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.
ವಿಚಾರಣೆಯ ವೇಳೆ 28 ವರ್ಷಗಳಿಂದ ಇಲ್ಲಿ 3 ಸಾವಿರ ಜನರು ವಾಸಿಸುತ್ತಿದ್ದರು ಎಂದು ವಾದ ಮಡಿಸಲಾಯಿತು.
ಪ್ರತಿ ಮನೆಯ ಬಗ್ಗೆ ಉಪಗ್ರಹ ಫೋಟೋ ಹಾಜರುಪಡಿಸಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪು ಈ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ ನಿರ್ವಸತಿಕರಾದವರಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದಿಂದ ಊಟ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಅಕ್ಷೇಪಣೆ ಸಲ್ಲಿಸಲು ಒಂದು ವಾರ ರಾಜ್ಯ ಸರ್ಕಾರ ಕಾಲಾವಕಾಶ ಕೋರಿತು. ಈ ವೇಳೆ ಹೈಕೋರ್ಟ್ ವಿಚಾರಣೆಯನ್ನು ಜನವರಿ 22ಕ್ಕೆ ನಿಗದಿಪಡಿಸಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



